ನಾಪೆÇೀಕ್ಲು, ಅ. 6: ಮಾನವ ಸೇರಿದಂತೆ ಭೂಮಿಯ ಮೇಲಿನ ಎಲ್ಲಾ ಜೀವ ಸಂಕುಲಗಳು ಉಳಿಯಬೇಕಾದರೆ ಅದು ಪರಿಸರ ರಕ್ಷಣೆಯಿಂದ ಮಾತ್ರ ಸಾಧ್ಯ. ಆದುದರಿಂದ ನಾವು ನಮ್ಮ ಬದುಕಿನ ಸ್ವಲ್ಪ ಸಮಯವನ್ನಾದರೂ ಪರಿಸರ ರಕ್ಷಣೆಗೆ ಮೀಸಲಿಡಬೇಕು ಎಂದು ವೀರಾಜಪೇಟೆ, ಮಡಿಕೇರಿ ಸಾವಯವ ಕೃಷಿ ಸಹಕಾರ ಸಂಘದ ಅಧ್ಯಕ್ಷ ಬಲ್ಟಿಕಾಳಂಡ ಮುದ್ದಣ್ಣ ಹೇಳಿದರು.
ಸಾವಯವ ಕೃಷಿ ಸಹಕಾರ ಸಂಘ, ತಾಮರ ರೆಸಾರ್ಟ್, ಕೊಡಗು ನೇಚರ್ಸ್ ಬೆಸ್ಟ್ ಪ್ಲೇವರ್ಸ್ ವೀರಾಜಪೇಟೆ ಮತ್ತು ನರಿಯಂದಡ ಪ್ರೌಢಶಾಲಾ ಸಂಯುಕ್ತಶ್ರಾಯದಲ್ಲಿ ನರಿಯಂದಡ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಬೀಜದ ಚೆಂಡು ತಯಾರಿ ಮತ್ತು ಬಿತ್ತನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದೆ ಕೊಡಗು ಜಿಲ್ಲೆಯಲ್ಲಿ ಮರ ಕಾಡುಗಳು ಯಥೇಚ್ಚವಾಗಿತ್ತು. ಕಾಲ, ಕಾಲಕ್ಕೆ ಸರಿಯಾದ ಬಿಸಿಲು, ಮಳೆ, ಬೆಳೆ ಎಲ್ಲಾ ಆಗುತ್ತಿತ್ತು. ಅತೀ ಹೆಚ್ಚು ಮಳೆ ಸುರಿದರೂ ಯಾವದೇ ಅನಾಹುತ ಸಂಭವಿಸಿರಲಿಲ್ಲ. ಆದರೆ ಈಗ ಮರ ಕಾಡುಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಮಣ್ಣು ಸಡಿಲಗೊಂಡು ಭೂ ಕುಸಿತ ಉಂಟಾಗತೊಡಗಿದೆ. ಇದಕ್ಕೆ ಪರಿಹಾರ ಮರಗಿಡಗಳನ್ನು ಬೆಳೆಸುವದಾಗಿದೆ ಎಂದರು. ನೋ ಬ್ಯಾಗ್ ಪ್ರೋಗ್ರಾಮ್ ಅಡಿಯಲ್ಲಿ ವಿದ್ಯಾರ್ಥಿಗಳು 5 ಸಾವಿರ ಬೀಜದ ಚೆಂಡುಗಳನ್ನು ತಯಾರಿಸಿ ದರು. ಹಿಂದೆ ತಯಾರಿಸಿದ ಚೆಂಡುಗಳನ್ನು ಚೇಲಾವರ ಬೆಟ್ಟದಲ್ಲಿ ಬಿತ್ತಲಾಯಿತು. ತಾಮರ ರೆಸಾರ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಬೆಟ್ಟಕ್ಕೆ ತೆರಳಲು ವಾಹನ ಸೌಲಭ್ಯ ಮತ್ತು ಉಪಹಾರ ನೀಡಿ ಪ್ರೋತ್ಸಾಹಿಸ ಲಾಯಿತು.
ಈ ಸಂದರ್ಭ ತಾಮರ ರೆಸಾರ್ಟ್ ವ್ಯವಸ್ಥಾಪಕಿ ಕಲಿಯಂಡ ನೀತು ಬೋಪಣ್ಣ, ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ, ಮುಖ್ಯ ಶಿಕ್ಷಕ ಮನೋಹರ್ ನಾಯಕ್, ಶಿಕ್ಷಕ ವೃಂದ ಇದ್ದರು.