ಸೋಮವಾರಪೇಟೆ, ಅ. 6: ಹೊಸಬೀಡು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ, ಅಕ್ಷರಾಭ್ಯಾಸ, ಇಸಿಸಿ ಕಾರ್ಯಕ್ರಮ ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯ ಉಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಇಓ ಕಚೇರಿಯ ಸಿಬ್ಬಂದಿ ಸತೀಶ್, ಸಹ ಶಿಕ್ಷಕ ಧರ್ಮರಾಜ್ ಅವರುಗಳು ಭಾಗವಹಿಸಿದ್ದರು. ಆಶಾ ಕಾರ್ಯಕರ್ತೆ ಅರ್ಪಿತ, ಅಂಗನವಾಡಿ ಕಾರ್ಯಕರ್ತೆ ಸುಮಾಮಣಿ, ಲಲಿತ ಕಾರ್ಯಕ್ರಮ ನಿರ್ವಹಿಸಿದರು. ಪುಟಾಣಿ ಮಕ್ಕಳಿಂದ ಅಭಿನಯ ಗೀತೆ ಸೇರಿದಂತೆ ಇತರ ಕಾರ್ಯಕ್ರಮ ನಡೆಯಿತು.