ನಾಪೋಕ್ಲು, ಅ. 6: ಕಕ್ಕಬ್ಬೆ ಕೃಷಿ ಪತ್ತಿನ ಸಹಕಾರ ಸಂಘವು 2018-19 ರ ಸಾಲಿನಲ್ಲಿ ರೂ. 11 ಕೋಟಿ ವಹಿವಾಟು ನಡೆಸಿದ್ದು, ರೂ. 13.28 ಲಕ್ಷ ನಿವ್ವಳ ಲಾಭ ಗಳಿಸಿ ಅಭಿವೃದ್ಧಿಯಲ್ಲಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಕಲ್ಯಾಟಂಡ ಎ. ರಘು ತಮ್ಮಯ್ಯ ತಿಳಿಸಿದರು. ಕಕ್ಕಬ್ಬೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಂಘದಲ್ಲಿ 1928 ಸದಸ್ಯರಿದ್ದಾರೆ. ರೂ. 74.13 ಲಕ್ಷ ಪಾಲು ಬಂಡವಾಳವನ್ನು ಹೊಂದಿದೆ ಹಾಗೂ ಸಂಘ ಸಂಸ್ಥೆ ಗಳಿಂದ 280.13 ಲಕ್ಷ ಠೇವಣಿಯನ್ನು ಸಂಗ್ರಹಿಸಿದೆ. ಸದಸ್ಯರಿಗೆ ಶೇ. 8 ಡಿವಿಡೆಂಡ್ ನೀಡಲಾಗಿದೆ ಎಂದರು. ಸಂಘದ ಉಪಾಧ್ಯಕ್ಷ ಅಲ್ಲಾರಂಡ ಎಸ್. ಅಯ್ಯಪ್ಪ, ನಿರ್ದೇಶಕರಾದ ಬಡಕ್ಕಡ ಎಂ. ಬೆಳ್ಯಪ್ಪ ಕಲ್ಯಾಟಂಡ ಎಂ. ಬೋಪಣ್ಣ, ಕೋಲೆಯಂಡ ಎ. ಅಶೋಕ್, ಎ.ಎನ್. ಲಕ್ಷ್ಮಣ, ನಿಡುಮಂಡ ಸಿ. ಪೂವಯ್ಯ, ಪಾಲೆ ಟಿ. ಕಾರ್ಯಪ್ಪ, ಕುಡಿಯರ ಗಿರೀಶ, ನಂಬಡಮಾಡ ಬಿ.ಸುನಿತ, ಪರದಂಡ ಪಿ. ಪ್ರಮೀಳ, ಕೋಡಿಮಣಿಯಂಡ ಎಂ. ನಾಣಯ್ಯ, ಉಪಸ್ಥಿತರಿದ್ದರು. ಸಂಘದ ಮೇಲ್ವಿಚಾರಕ ಮೇಚಂಡ ಎ. ಚೇತನ್, ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಎಸ್. ಮಂಜುಳ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.