ಶನಿವಾರಸಂತೆ, ಅ. 6: ಸಮೀಪದ ದುಂಡಳ್ಳಿ ಗ್ರಾ.ಪಂ.ಯ 2019ನೇ ಸಾಲಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ರಾಜ್ಯ ಸರಕಾರ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊಸದಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜಾರಿಗೊಳಿಸಿರುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸ ಬೇಕಾಗಿದ್ದು, ಸಭೆಯಲ್ಲಿ ಗ್ರಾ.ಪಂ.ಯ ಅಭಿವೃದ್ಧಿ ಕಾರ್ಯದ ಬಗ್ಗೆ ಇಲಾಖೆಯ ಅಧಿಕಾರಿಗಳು ಚರ್ಚಿಸಬೇಕಾಗುತ್ತದೆ. ಆದರೆ ದುಂಡಳ್ಳಿ ಗ್ರಾ.ಪಂ.ಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಹಾರ ಇಲಾಖೆ, ಕೃಷಿ ಇಲಾಖೆ, ಆರೋಗ್ಯ, ಅರಣ್ಯ, ಲೋಕೋಪ ಯೋಗಿ, ಸಹಕಾರ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದರು. ಕಂದಾಯ ಇಲಾಖೆ, ಜಿ.ಪಂ. ಇಲಾಖೆ, ತೋಟ ಗಾರಿಕೆ, ಶಿಕ್ಷಣ, ಪಶು ಸಂಗೋಪನೆ ಇಲಾಖೆ, ಚೆಸ್ಕಾಂ ಅಧಿಕಾರಿಗಳನ್ನು ಹೊರತು ಪಡಿಸಿದಂತೆ ಅವಶ್ಯವಾಗಿ ಹಾಜರಾಗಬೇಕಿದ್ದ ಇಲಾಖೆ ಅಧಿಕಾರಿಗಳು ಗೈರು ಹಾಜರಾತಿ ಎದ್ದು ಕಾಣುತ್ತಿತ್ತು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಅಧಿಕಾರಿ ಮಂಜುನಾಥ್, ಗ್ರಾ.ಪಂ. ವ್ಯಾಪ್ತಿಯಲ್ಲಿ ಫಲಾನುಭವಿ ಗಳಿಗೆ ಇಲಾಖೆಯಿಂದ ನೀಡಿರುವ ಹಕ್ಕುಪತ್ರ ವಿತರಣೆ ಮಾಡಿರುವ ಬಗ್ಗೆ ಮಾಹಿತಿ ನೀಡಿದರು. ಕಂದಾಯ ಇಲಾಖೆ ಬಿಪಿಎಲ್ ಫಲಾನುಭ ವಿಗಳಿಗೆ ನೀಡುವ ಆದಾಯ ದೃಢೀಕರಣ ಪತ್ರದಲ್ಲಿ ವಾರ್ಷಿಕ ಆದಾಯವನ್ನು 1.25 ಲಕ್ಷ ರೂ.ಗೆ ದೃಢೀಕರಣ ಗೊಳಿಸುವದರಿಂದ ಗ್ರಾ.ಪಂ. ಯಿಂದ ಮನೆ ಇಲ್ಲದ ಹಕ್ಕುಪತ್ರ ಹೊಂದಿರುವ ಅಧಿಕಾರಿ ಗಳಲ್ಲಿ ಗ್ರಾ.ಪಂ.ಯನ್ನು ಅಭಿವೃದ್ಧಿ ಪಡಿಸುವ ಮನೋಭಾವನೆ ಹೆಚ್ಚಾಗುತ್ತದೆ. ಇದರಿಂದ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಕ್ಕಿದಂತಾ ಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ರೂಪ, ಗ್ರಾ.ಪಂ. ಕಾರ್ಯದರ್ಶಿ ವೇಣುಗೋಪಾಲ್, ಗ್ರಾ.ಪಂ. ಸರ್ವ ಸದಸ್ಯರುಗಳು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.