ಸಿದ್ದಾಪುರ, ಅ. 6 : ಪಾಲಿಬೆಟ್ಟದ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಎಂಟನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮವನ್ನು ತಾ.7ರಂದು (ಇಂದು) ಪಾಲಿಬೆಟ್ಟದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಆಟೋ ರಿಕ್ಷಾಗಳಿಗೆ ಸಾಮೂಹಿಕ ಪೂಜೆ ಹಾಗೂ ಅಲಂಕೃತ ಆಟೋಗಳ ಮೆರವಣಿಗೆ, ನಂತರ 10 ಗಂಟೆಗೆ ವಿವಿಧ ಆಟೋಟ ಸ್ಪರ್ಧೆ ನಡೆಯಲಿದ್ದು, ಸಂಜೆ 7 ಗಂಟೆಗೆ ವೇದಿಕೆ ಕಾರ್ಯಕ್ರಮ ಹಾಗೂ 7.30 ಕ್ಕೆ ಯೋಧ ಮೇಲೊಡಿಸ್ ತಂಡದಿಂದ ರಸಮಂಜರಿ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.