ಮಡಿಕೇರಿ, ಅ. 6 : ಮುಂಗಾರಿನ ಮಹಾಮಳೆÉಯಿಂದ ಉದ್ಭವಿಸಿದ ನೆರೆಯಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಜನತೆಯನ್ನು ರಾಜ್ಯ ಸರ್ಕಾರ ಯಾವದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಿಲ್ಲವೆಂದು ಶಾಸಕ ಅಪ್ಪಚ್ಚುರಂಜನ್ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.
ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರೀ ಮಳೆಯಿಂದ ಪ್ರವಾಹದೊಂದಿಗೆ ಪ್ರಾಕೃತಿಕ ವಿಕೋಪಗಳು ಸಂಭವಿಸಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಂತದಲ್ಲಿ ಜನಪ್ರತಿನಿಧಿಗಳಾದ ನಾವು ಜಿಲ್ಲಾಡಳಿತದೊಂದಿಗೆ ಸಂತ್ರಸ್ತರಿಗೆ ಆರಂಭಿಕ ಹಂತದಲ್ಲಿ ಅಗತ್ಯ ನೆರವು, ತಾತ್ಕಾಲಿಕ ಪರಿಹಾರವನ್ನು ಒದಗಿಸಿದ್ದೇವೆ. ಹೀಗೆ ಸಂಕಷ್ಟ ಎದುರಾದ ಸಂದರ್ಭ ಆಯಾ ಕ್ಷೇತ್ರದ ಶಾಸಕರು ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಕಳೆದ ಸಾಲಿನ ಮುಂಗಾರಿನ ಸಂಕಷ್ಟಗಳ ಸಂದರ್ಭ ಸಂತ್ರಸ್ತರಿಗೆ ಆರಂಭಿಕ ಹಂತದಲ್ಲಿ ರೂ.3800 ಪರಿಹಾರವನ್ನು ಒದಗಿಸಿದ್ದರೆ, ಈ ಸಾಲಿನಲ್ಲಿ ರೂ. 10 ಸಾವಿರ ನೆರವನ್ನು ಒದಗಿಸಿದ್ದೇವೆಂದು ಸ್ಪಷ್ಟಪಡಿಸಿದ ಅಪ್ಪಚ್ಚು ರಂಜನ್, ಮಹಾಮಳೆಯಿಂದ ಶೇ.15 ರಿಂದ 20 ರಷ್ಟು ಹಾನಿಗೊಳಗಾದ ಮನೆಗಳಿಗೆ ಸಂಬಂಧಿಸಿದಂತೆ ತಲಾ ರೂ. 15 ರಿಂದ 20 ಸಾವಿರ ಪರಿಹಾರ, ಮನೆಯ ಸಾಮಗ್ರಿಗಳನ್ನು ಕಳೆದುಕೊಂಡು ತೊಂದರೆಗೆ ಸಿಲುಕಿದ 500 ಕ್ಕೂ ಹೆಚ್ಚಿನ ಸಂತ್ರಸ್ತರಿಗೆ ತಲಾ ರೂ. 50 ಸಾವಿರ ನೆರವನ್ನು ಒದಗಿಸಲಾಗಿದೆಯೆಂದು ಮಾಹಿತಿಯನ್ನಿತ್ತು, ಪ್ರಸಕ್ತ ಸಾಲಿನ ಭಾರೀ ಮಳೆಯಿಂದ ಮಡಿಕೆÉೀರಿ ತಾಲ್ಲೂಕಿನಲ್ಲಿ 68 ಮನೆ, ಸೋಮವಾರಪೆÉೀಟೆ ತಾಲೂಕಿನಲ್ಲಿ 103 ಮತ್ತು ವೀರಾಜಪೇಟೆ ತಾಲೂಕಿನ 190 ಮನೆಗಳು ಸೇರಿದಂತೆ ಒಟ್ಟು 361 ಮನೆಗಳು ಸಂಪೂರ್ಣ ಕುಸಿದು ಬಿದ್ದಿದ್ದು, ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಒಟ್ಟು 4148 ಕುಟುಂಬಗಳಿಗೆ ಆರಂಭಿಕ ಹಂತದ ಅಗತ್ಯ ನೆರವನ್ನು ಒದಗಿಸಲಾಗಿದೆ. ಇದರೊಂದಿಗೆ
ಕಳೆದ 2018ನೇ ಸಾಲಿನ ಪ್ರಾಕೃತಿಕ ವಿಕೋಪದಲ್ಲಿ ಸಾವನ್ನಪ್ಪಿದ 20 ಮಂದಿ ಹಾಗೂ ಈ ಬಾರಿಯ ವಿಕೋಪದಲ್ಲಿ ಸಾವನ್ನಪ್ಪಿದ 16 ಮಂದಿಗೆ ತಲಾ ರೂ.5 ಲಕ್ಷ ಪರಿಹಾರವನ್ನು ಈಗಾಗಲೇ ಒದಗಿಸಲಾಗಿದೆಯೆಂದು ಶಾಸಕ ಅಪ್ಪಚ್ಚು ರಂಜನ್ ಮಾಹಿತಿಯನ್ನು ಒದಗಿಸಿದರು.
ರೂ.4.25 ಕೋಟಿ ನೆರವು - ಜಿಲ್ಲಾ ವ್ಯಾಪ್ತಿಯಲ್ಲಿ ನೆರೆ ಹಾಗೂ ಪ್ರಾಕೃತಿಕ ವಿಕೋಪಗಳಿಂದ ಹಾನಿಗೊಳಗಾದ ಮನೆಗಳಿಗೆ ಸಂಬಂಧಿಸಿದಂತೆ ರೂ.4.25 ಕೋಟಿ ನೆರವನ್ನು ಒದಗಿಸಲಾಗಿದ್ದರೆ, ಜಾನುವಾರುಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೂ.9.97 ಲಕ್ಷ ಪರಿಹಾರವನ್ನು ಒದಗಿಸಲಾಗಿದೆಯೆಂದು ತಿಳಿಸಿದರು.
ಕೊಡಗಿನ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ- ಕೊಡಗಿನ ಮಳೆÉಹಾನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಘೋಷಿಸಿರುವ ರೂ.532 ಕೋಟಿ ನೆರವಿನಲ್ಲಿ 100 ಕೋಟಿಯನ್ನು ಇಲ್ಲಿನ ರಸ್ತೆಗಳ ದುರಸ್ತಿ ಮತ್ತು ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ರೂ.40 ಕೋಟಿ ಜಿಲ್ಲಾ ಪಂಚಾಯ್ತಿಗೆ, ರೂ. 30 ಕೋಟಿ ಪಿಡಬ್ಲ್ಯೂಡಿಗೆ ಹಾಗೂ ಉಳಿದ ಮೊತ್ತವನ್ನು ನಗರ ಪ್ರದೇಶಗಳ ಕಾಮಗಾರಿಗೆ ಒದಗಿಸಲಾಗಿದೆ. ಅದರಂತೆ ಮಡಿಕೆÉೀರಿ ನಗರಸಭೆಗೆ 6 ಕೋಟಿ, ವೀರಾಜಪೇಟೆ ಪಟ್ಟಣ ಪಂಚಾಯ್ತಿಗೆ 3 ಕೋಟಿ, ಕುಶಾಲನಗರ ಮತ್ತು ಸೋಮವಾರಪೇಟೆ ಪ.ಪಂ.ಗಳಿಗೆ ತಲಾ ರೂ.2 ಕೋಟಿ ಒದಗಿಸಲಾಗಿದೆಯೆಂದು ಶಾಸಕರು ವಿವರಗಳನ್ನಿತ್ತರು.
ಸರ್ಕಾರದಿಂದ ರೂ.3500 ಕೋಟಿ ನೆರವು- ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ನೆರೆ ಹಾವಳಿಗೆÉ ಸಂಬಂಧಿಸಿಂತೆ ರಾಜ್ಯ ಸರ್ಕಾರ ಒಟ್ಟಾಗಿ ರೂ.3500 ಕೋಟಿ ರೂ.ಗಳನ್ನು ಒದಗಿಸಿದ್ದು, ಇದೀಗ ಕೇಂದ್ರ ಸರ್ಕಾರ ರೂ.1200 ಕೋಟಿಯನ್ನು ಮಧ್ಯಂತರ ಪರಿಹಾರವಾಗಿ ಒದಗಿಸಿದೆಯೆಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.
ನವೆಂಬರ್ ಅಂತ್ಯದೊಳಗೆ ಸಂತ್ರಸ್ತರಿಗೆ ಮನೆ- ಪ್ರಸ್ತುತ ಜಿಲ್ಲೆಯ ವಿವಿಧೆಡೆಗಳಲ್ಲಿ ಅಂದಾಜು 300 ಮನೆಗಳ ನಿರ್ಮಾಣವಾಗಿದ್ದು, ಇವುಗಳನ್ನು ಮುಂದಿನ ನವೆಂಬರ್ ಅಂತ್ಯದ ಒಳಗಾಗಿ ಸಂತ್ರಸ್ತರಿಗೆ ಮುಖ್ಯಮಂತ್ರಿಗಳ ಮೂಲಕ ಕೊಡಿಸುವ ಕೆಲಸ ಮಾಡಲಾಗುತ್ತದೆ. ಇನ್ನುಳಿದ ಎಲ್ಲಾ ಮನೆಗಳ ನಿರ್ಮಾಣಕ್ಕೆ ಒಂದು ವರ್ಷದ ಕಾಲಾವಧಿ ಬೇಕಾಗಬಹುದೆಂದು ಅಭಿಪ್ರಾಯಿಸಿದರು.
ಹೊಳೆ ದಂಡೆ ನಿವಾಸಿಗಳ ಸ್ಥಳಾಂತರ- ಹೊಳೆÉ ದಂಡೆಯ ಅಪಾಯಕಾರಿ ಸ್ಥಳಗಳಲ್ಲಿ ನೆಲೆಸಿರುವವರನ್ನು ಅಗತ್ಯ ಜಾಗ ಗುರುತಿಸಿ ಸ್ಥಳಾಂತರ ಮಾಡಲಾಗುತ್ತದೆ. ನದಿ ಪಾತ್ರದಲ್ಲಿ ಇರುವವರು ಅಲ್ಲಿಂದ ಹೊರ ಬರಲೇ ಬೇಕೆಂದು ಸ್ಪಷ್ಟಪಡಿಸಿದ ಶಾಸಕರು, ನದಿ ಪಾತ್ರದಿಂದ ಹೊರ ಬಂದರೂ ಅಲ್ಲಿನ ಕೃಷಿ ಭೂಮಿಯನ್ನು ಅವರು ಉಳಿಸಿಕೊಳ್ಳಬಹುದು. ಆದರೆ, ನದಿ ಪಾತ್ರದಿಂದ ಹೊರಬಾರದೇ ಇರುವವರಿಗೆ ಪರಿಹಾರ ನೀಡುವದಿಲ್ಲವೆಂದು ದೃಢವಾಗಿ ನುಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ ಹಾಗೂ ನಗರಸಭಾ ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ ಉಪಸ್ಥಿತರಿದ್ದರು.