ಮಡಿಕೇರಿ, ಅ. 6: ಅಂಬೇಡ್ಕರ್ ಒಂದು ದೇಶಕ್ಕೆ ಒಂದು ಧರ್ಮಕ್ಕೆ ಸೀಮಿತವಾದ ವ್ಯಕ್ತಿಯಲ.್ಲ ಇಡೀ ಮನುಕುಲಕ್ಕೆ ಅವರ ವಿಚಾರಧಾರೆಗಳು ಅಗತ್ಯವಾಗಬೇಕಿದೆ. ದೀನದಲಿತರಿಗೆ ಶೋಷಿತರಿಗೆ ಬಡವರಿಗೆ ಅವರು ಬಾಳಿನ ಬೆಳಕಾಗಿದ್ದರು ಎಂದು ಆಲೂರು-ಸಿದ್ದಾಪುರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಗಣಪತಿ ಭಟ್ ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಡಾ. ಬಿ.ಅರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಕಾಲೇಜಿನ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಶಿಲ್ಪಿಯಾಗಿ ಸಮಾಜದಲ್ಲಿ ಸಮಾನತೆಗಾಗಿ ಪಣತೊಟ್ಟವರು. ಅಂಬೇಡ್ಕರ್ ರವರು ಸಾಕಷ್ಟು ಪುಸ್ತಕಗಳನ್ನು ಓದುವದರ ಮೂಲಕ ಜ್ಞಾನ ಸಂಪಾದಿಸಿಕೊಂಡರು ಎಂದರು. ಅಂಬೇಡ್ಕರ್ ರವರ ಪುಸ್ತಕಗಳನ್ನು ಓದುವದರ ಮೂಲಕ ಸ್ಪೂರ್ತಿ ಪಡೆಯಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಉಪನ್ಯಾಸ ನೀಡಿದ ಉಪನ್ಯಾಸಕ ಶಿವಕುಮಾರ್ ಅಂಬೇಡ್ಕರ್ ಅವರು ಆರ್ಥಿಕ, ಸಾಮಾಜಿಕ ರಾಜಕೀಯ ಭದ್ರತೆಗೆ ಬುನಾದಿ ಹಾಕಿದವರು. ಶಿಕ್ಷಣ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಸಾಮಾನ್ಯ ಜನರಿಗೆ ತಲಪಿಸುವಲ್ಲಿ ಮಹತ್ವ ಪಾತ್ರ ವಹಿಸಿದವರು ಎಂದರು.
ಅಂಬೇಡ್ಕರ್ ಅವರ ವಿಚಾರಗಳನ್ನು ವಿದ್ಯಾರ್ಥಿಗಳು ತಿಳಿದು ಆತ್ಮಸ್ಥೈರ್ಯ ಬೆಳಸಿಕೊಳ್ಳಬೇಕೆಂದರು. ಭಾರತದ ನಿರ್ಮಾಣಕ್ಕಾಗಿ ಶ್ರಮಿಸಿದ ಅಂಬೇಡ್ಕರ್‍ರವರ ಪುಸ್ತಕಗಳನ್ನು ಓದುವದು ಅಗತ್ಯ ಎಂದು ಇಲಾಖೆಯ ಮಣಜೂರು ಮಂಜುನಾಥ್ ಪ್ರಾಸ್ತಾವಿಕವಾಗಿ ತಿಳಿಸಿದರು.
ವೇದಿಕೆಯಲ್ಲಿ ಉಪನ್ಯಾಸಕರು ಗಳಾದ ಎಸ್.ಬಿ. ಮಲ್ಲೇಶ್, ಹೆಚ್.ಪಿ. ರಾಗವಿ, ಎ.ಕೆ. ವಿಶ್ವನಾಥ, ಮೌಲ್ಯ ಇದ್ದರು. ಕಾರ್ಯಕ್ರಮದ ಮೊದಲಿಗೆ ರಕ್ಷಿತಾ ಪ್ರಾರ್ಥಿಸಿ ಹೆಚ್.ಎಂ. ಕಾರ್ತಿಕ್ ಸ್ವಾಗತಿಸಿ, ಅಮೂಲ್ಯ ವಂದಿಸಿದರು.