ಕಡಂಗ, ಅ. 6: ಜಿಲ್ಲೆಯ ಪ್ರತಿಷ್ಠಿತ ವೀರಾಜಪೇಟೆ ಅನ್ವರುಲ್ ಹುದಾ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಆಧ್ಯಾತ್ಮಿಕ ಅಸ್ಮಾಹುಲ್ ಹುಸ್ನ ಮಜಲಿಸ್‍ನಲ್ಲಿ ಕೊಡಗಿನ ಮುಸ್ಲಿಮರ ಸಶಕ್ತ ವಿದ್ವಾಂಸರ ಒಕ್ಕೂಟವಾದ ಕೂರ್ಗ್ ಜಂಯುತುಲ್ ಉಲಮಾ ಇದರ ಸಾರಥಿಗಳಾಗಿ ನೂತನವಾಗಿ ಚುನಾಯಿತರಾದ ಸಂಸ್ಥೆಯ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಸೈಕುನಾ ಮಹಮೂದ್ ಉಸ್ತಾದ್ ಎಡಪಾಲ, ಹುಸೈನ್ ಸಖಾಫಿ ಎಮ್ಮೆಮಾಡು ಅವರನ್ನು ಸಯ್ಯಿದ್ ಶಾಫಿ ಬಆಲವಿ ಕೇರಳ ಸಂಸ್ಥೆಯ ಪರವಾಗಿ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಾಯಕರು, ವಿದ್ಯಾರ್ಥಿಗಳು ಮತ್ತು ಭಕ್ತರು ಪಾಲ್ಗೊಂಡಿದ್ದರು.