ಮರಗೋಡು, ಅ. 6: ಮರಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 40 ವಿದ್ಯಾರ್ಥಿಗಳಿಗೆ ಮಡಿಕೇರಿ ಇಸಿಹೆಚ್ ಪಾಲಿ ಕ್ಲಿನಿಕ್ ವೈದ್ಯ ಪೊರೆಯಂಡ ಕರ್ನಲ್ ಅಯ್ಯಪ್ಪ ಅವರು ಉಚಿತ ಬ್ಯಾಗ್, ನೋಟ್ ಪುಸ್ತಕ ಮತ್ತು ಇತರ ಸಾಮಗ್ರಿಗಳನ್ನು ಒಳಗೊಂಡ ಕಿಟ್‍ಗಳನ್ನು ಉಚಿತವಾಗಿ ವಿತರಿಸಿದರು. ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದ ಮಕ್ಕಳಿಗೆ ಈ ಸಾಮಗ್ರಿಗಳನ್ನು ಒದಗಿಸಿದರು. ಜೊತೆಗೆ, ಗಂಟೆಗೆ 50 ಲೀಟರ್ ನೀರು ಶುದ್ದೀಕರಿಸುವ ನೀರಿನ ಫಿಲ್ಟರ್ ಅನ್ನು ಕೂಡ ಶಾಲೆಗೆ ಉಚಿತವಾಗಿ ವಿತರಿಸಿದರು. ಈ ಸಂದರ್ಭ ಶಾಲಾ ಮುಖ್ಯೋಪಾ ಧ್ಯಾಯಿನಿ ಶೈಲಾ, ಎಸ್ಡಿಎಂಸಿ ಅಧ್ಯಕ್ಷರು, ಶಾಲಾ ಸಿಬ್ಬಂದಿ ಮತ್ತು ಇಸಿಹೆಚ್ ಕ್ಲಿನಿಕ್ ಸಿಬ್ಬಂದಿ ಉಪಸ್ಥಿತರಿದ್ದರು.

ಅದೇ ದಿನ ಕಟ್ಟೆಮಾಡು ಗ್ರಾಮದ ಪ್ರಾಥಮಿಕ ಶಾಲೆಯ 10 ವಿದ್ಯಾರ್ಥಿಗಳಿಗೂ ಕೂಡ ಕರ್ನಲ್ ಅಯ್ಯಪ್ಪ ಅವರು ಉಚಿತ ಶಾಲಾ ಕಿಟ್ ವಿತರಣೆ ಮಾಡಿದರು.