ಸೋಮವಾರಪೇಟೆ, ಅ. 5: ಬಿಸಿಲಿನ ಬೇಗೆ ಇದ್ದ ಸೋಮವಾರಪೇಟೆ ಪಟ್ಟಣ ವ್ಯಾಪ್ತಿಗೆ ಇಂದು ಸಂಜೆ ಭಾರೀ ಮಳೆ ಸುರಿಯಿತು.

ಸಂಜೆ 5 ಗಂಟೆ ಸುಮಾರಿಗೆ ದಟ್ಟ ಮೋಡದೊಂದಿಗೆ ಮಳೆಯಾಯಿತು. ಇದರಿಂದಾಗಿ ಕೆಲಸ ಮುಗಿಸಿ ಮನೆ ಕಡೆ ಹೊರಟಿದ್ದ ಸಾರ್ವಜನಿಕರು, ಶಾಲಾ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಸುಮಾರು 40 ನಿಮಿಷಗಳ ಕಾಲ ಎಡೆಬಿಡದೆ ಮಳೆ ಸುರಿಯಿತು. ಈಗಾಗಲೇ ಅಕಾಲಿಕ ವಾಗಿ ಹಣ್ಣಾಗಿರುವ ಕಾಫಿಯನ್ನು ಕೊಯ್ಲು ಮಾಡಿ ಒಣಗಲು ಹಾಕಿದ್ದ ಬೆಳೆಗಾರರು ತೊಂದರೆಗೆ ಸಿಲುಕಿದರು.

ಉತ್ತರ ಕೊಡಗಿನ ಶನಿವಾರಸಂತೆ, ಕೊಡ್ಲಿಪೇಟೆ, ಗ್ರಾಮಾಂತರ ಭಾಗಗಳಲ್ಲಿಯೂ ಮಳೆಯಾಗಿದೆ. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತ ಮುತ್ತ ಕೂಡ ಸಾಧಾರಣ ಮಳೆಯಾಗಿದೆ.