ಮಡಿಕೇರಿ, ಅ. 5: ಕಳೆದ ಆಗಸ್ಟ್ 9ರಂದು ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ತೋರದಲ್ಲಿ ಸಂಭವಿಸಿದ್ದ ಭೂಕುಸಿತದಿಂದ ಕಣ್ಮರೆಯಾಗಿದ್ದ ನಾಲ್ವರು ದುರ್ದೈವಿಗಳ ಕುಟುಂಬಕ್ಕೆ ರಾಜ್ಯ ಸರಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ತಲಾ ರೂ. 5 ಲಕ್ಷ ನೆರವು ಘೋಷಿಸಿದೆ.