ಗುಡ್ಡೆಹೊಸೂರು, ಅ. 4: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಪ್ರೌಢಶಾಲೆಯ ವಿದ್ಯಾರ್ಥಿ ರಾಕೇಶ್ ಶಿಕ್ಷಣ ಇಲಾಖೆ ಆಯೋಜಿಸಿದ್ದ 2019-20ನೇ ಸಾಲಿನ ಕ್ರೀಡಾಕೂಟದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಸತತ ಎರಡನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಲಕ್ಷ್ಮಣ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ಮತ್ತು ಆಲೂರು ಸಿದ್ದಾಪುರದ ಪ್ರೌಢಶಾಲೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಗುಂಡು ಎಸೆತ, ತಟ್ಟೆ ಎಸೆತ ಮತ್ತು ಜಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಪಡೆದಿರುತ್ತಾನೆ. ಈ ಯುವಕನು ಕ್ರೀಡೆಯ ಜೊತೆಯಲ್ಲಿ ಓದಿನಲ್ಲು ಮುಂಚೂಣಿ ಯಲ್ಲಿದ್ದು, ಗಾಂಧಿ ಜಯಂತಿ ದಿನದಂದು ಶಾಲೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಎಸ್.ಡಿ. ಎಂ.ಸಿ.ಯವರು ಮತ್ತು ಶಾಲೆಯ ಮುಖ್ಯ ಶಿಕ್ಷಕರಾದ ಕೃಷ್ಣನಾಯಕ್ ಶಿಕ್ಷಕರಾದ ವೆಂಕಟೇಶ್, ಶ್ರೀನಿವಾಸ್ ವಿ.ನಾಯಕ್, ಲತಾ, ವೀಣಾ, ವಿಜಯಲಕ್ಷ್ಮೀ, ಮುಂತಾದವರು ಹಾಜರಿದ್ದರು.