ವೀರಾಜಪೇಟೆ, ಅ. 4: ವೀರಾಜಪೇಟೆಯ ಕಾವೇರಿ ಶಾಲೆಯ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಶಾಲಾ ಆಡಳಿತ ಮಂಡಳಿಯ ಸಮ್ಮುಖದಲ್ಲಿ ನಡೆಸಲಾಯಿತು.
ವಿದ್ಯಾರ್ಥಿ ಸಂಘಕ್ಕೆ ಶಾಲಾ ನಾಯಕಿಯಾಗಿ 10ನೇ ತರಗತಿಯ ಕುಮಾರಿ ತೃಷಾ ಕೆ.ಬಿ., ಕ್ರೀಡಾನಾಯಕಿಯಾಗಿ ಗಾಯನ ಬೋಪಣ್ಣ ಜಿ, 10ನೇ ತರಗತಿ, ಸಾಂಸ್ಕøತಿಕ ಚಟುವಟಿಕೆ ನಾಯಕನಾಗಿ 10ನೇ ತರಗತಿಯ ಪ್ರಣವ್ ಪಿ.ಪಿ., ಆಯ್ಕೆಯಾಗಿದ್ದಾರೆ. ಶಾಲೆಯಲ್ಲಿ ವಿವಿಧ ಚಟುವಟಿಕೆಗಳ ಸಲುವಾಗಿ ವಿದ್ಯಾರ್ಥಿಗಳನ್ನು ಪ್ರೇರಣ, ಅಮೃತ, ಅದಿತ ಹಾಗೂ ಶ್ರದ್ಧಾ ಎಂಬ ನಾಲ್ಕು ಗುಂಪುಗಳಾಗಿ ವಿಭಾಗಿಸಿದ್ದು - ಈ ಗುಂಪುಗಳ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಯ್ಕೆಯಾದ ನಾಯಕರನ್ನು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುದೇಶ್ ಕುಮಾರ್ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಮುಂದುವÀರಿಯುವಂತೆ ಹಿತವಚನ ನುಡಿದರು. ಶಾಲೆಯ ಕಾರ್ಯದರ್ಶಿ ವಿನೋದ್ ಆಯ್ಕೆಯಾದ ನಾಯಕರಿಗೆ ಪ್ರಮಾಣವಚನ ಬೋಧಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಮಿಳಾ ಎಂ.ಬಿ. ಹಾಗೂ ಪ್ರಾಥಮಿಕ ಶಾಲಾ ಸಂಯೋಜಕಿ ಜೋಯ್ಸಿ ಗಣಪತಿ ಉಪಸ್ಥಿತರಿದ್ದು ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್‍ಗಳನ್ನು ವಿತರಿಸಿದರು.