ಗೋಣಿಕೊಪ್ಪ ವರದಿ, ಅ. 4: ಶಿವಮೊಗ್ಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಪೌಢಶಾಲಾ ಫುಟ್ಬಾಲ್ ಕ್ರೀಡಾಕೂಟದಲ್ಲಿ ಮೈಸೂರು ವಲಯವನ್ನು ಪ್ರತಿನಿಧಿಸಿರುವ ಗೋಣಿಕೊಪ್ಪ ಲಯನ್ಸ್ ಪ್ರೌಢಶಾಲಾ ತಂಡವು ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿದೆ.
ತಂಡದಲ್ಲಿ ಬಿ.ಯು. ಪೊನ್ನಮ್ಮ, ರೀಶ್ಮಾ ಗಂಗಮ್ಮ, ಕೆ.ಪಿ. ಪುಷ್ಯಾ, ಪ್ರಲಿ ಬೋಜಮ್ಮ, ಜಿ.ಎನ್. ನಯನ, ಯಾನಾ ಮುತ್ತಮ್ಮ, ಗಯಾನ ಗಂಗಮ್ಮ, ಸಾನಿಯಾ ದೇಚಮ್ಮ, ಆಂಚಲ್ ಬೋಜಮ್ಮ, ಶ್ರಾವ್ಯ ದೇಚಮ್ಮ, ಕಾವ್ಯಶ್ರೀ, ವೈ.ಎಂ. ನೇತ್ರಾ ಪಾಲ್ಗೊಂಡಿದ್ದರು.
ಇದರೊಂದಿಗೆ ಉತ್ತಮ ಪ್ರದರ್ಶನ ನೀಡಿದ ಆಟಗಾರರಾದ ಬಿ.ಯು. ಪೊನ್ನಮ್ಮ, ರೀಶ್ಮಾ ಗಂಗಮ್ಮ, ಯಾನಾ ಮುತ್ತಮ್ಮ, ಕೆ.ಪಿ. ಪುಷ್ಯಾ, ಗಯಾನ ಗಂಗಮ್ಮ, ಜಿ.ಎನ್. ನಯನಾ, ಸಾನಿಯಾ ದೇಚಮ್ಮ, ಆಂಚಲ್ ಬೋಜಮ್ಮ, ಪ್ರಲಿ ಬೋಜಮ್ಮ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. ತರಬೇತುದಾರರಾಗಿ ನಾಗೇಶ್, ವ್ಯವಸ್ಥಾಪಕರಾಗಿ ಬಬಿತಾ ತೆರಳಿದ್ದರು.