ನಾಪೆÉÇೀಕ್ಲು, ಅ. 2: ನಾಪೆÇೀಕ್ಲು, ಕೊಂಡಂಗೇರಿ, ಕರಡಿಗೋಡು ಸೇರಿದಂತೆ ಕಾವೇರಿ ನದಿ ತೀರದಲ್ಲಿ ವಾಸವಿರುವ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸು ವದು ಸರಕಾರ ಮತ್ತು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ ಎಂದು ಕೊಡಗು ಮುಸ್ಲಿಂ ಸಮಾಜದ ಸಂಚಾಲಕ, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಿ.ಎಂ. ಖಾಸಿಂ ಹೇಳಿದ್ದಾರೆ.

ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾವೇರಿ ನದಿ ದಡದಲ್ಲಿ ವಾಸಿಸುತ್ತಿರುವದರಿಂದ ನದಿ ನೀರು ಮಾಲಿನ್ಯವಾಗು ತ್ತದೆ ಎಂಬದು ಸರಿ. ಆದರೆ ವಸತಿ ರಹಿತರು ಅಲ್ಲಿ ಮನೆ ನಿರ್ಮಿಸುವ ಸಮಯದಲ್ಲಿ ಅವರನ್ನು ಜಿಲ್ಲಾಡಳಿತ ಏಕೆ ತಡೆಯಲಿಲ್ಲ ಎಂದು ಪ್ರಶ್ನಿಸಿದ ಅವರು, ಈಗ ಅಲ್ಲಿ ನೂರಾರು ಮನೆಗಳು ನಿರ್ಮಾಣವಾದ ನಂತರ ಅವರಿಗೆ ಶಾಶ್ವತ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳುತ್ತಿರುವದು ಸಮಂಜಸವಲ್ಲ ಎಂದರು. ಕೆಲವು ರಾಜಕೀಯ ಮುಖಂಡರ ಕೆಟ್ಟ ರಾಜಕೀಯ ದಿಂದ ನಿರಾಶ್ರಿತರಿಗೆ ಈ ಗತಿ ಬಂದಿದೆ. ಮನೆ ಕಟ್ಟಲು ಹೇಳುವವರೂ ಅವರೇ, ಅದನ್ನು ಕೆಡವಲು ಹೇಳುವವರೂ ಅವರೇ. ಅದರಲ್ಲಿ ಬಲಿಪಶುಗಳಾ ದವರು ಪಾಪದ ಜನ. ಕೂಲಿ, ನಾಲಿ ಮಾಡಿದ ಹಣವನ್ನು ತಮ್ಮ ಬದುಕಿಗಾಗಿ ವೆಚ್ಚಮಾಡಿ ಈಗ ರಸ್ತೆಗೆ ಬಂದು ಬಿದ್ದಿದ್ದಾರೆ. ಅವರನ್ನು ಅನಾಧಿಕೃತರು ಎಂದು ಕರೆಯ ಬಾರದು. ಇದರಲ್ಲಿ ಅವರ ತಪ್ಪು ಏನು ಇಲ್ಲ. ಜಿಲ್ಲಾಡಳಿತ ಎಲ್ಲರಿಗೂ ಶಾಶ್ವತ ಸೂರು ನಿರ್ಮಿಸಿಕೊಡಬೇಕು. ಅದು ಜವಾಬ್ದಾರಿ ಕೂಡ ಆಗಿದೆ ಎಂದು ಆಗ್ರಹಿಸಿದರು.