ಮಡಿಕೇರಿ, ಅ. 2: ವಿವಾಹಿತ ಮಹಿಳೆಯೋರ್ವರು ನಾಪತ್ತೆಯಾಗಿರುವ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಂದೂರು ನಿವಾಸಿ ಅರುಣ್ ಕುಮಾರ್ ಹಾಗೂ ಅವರ ಪತ್ನಿ ರತ್ನ ಎಂಬವರ ನಡುವೆ ಮನಸ್ತಾಪವುಂಟಾಗಿ ಇದು ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಬಳಿಕ ರಾಜಿ ತೀರ್ಮಾನದ ಬಳಿಕ ಪ್ರಕರಣ ಇತ್ಯರ್ಥವಾಗಿ ಗಂಡನ ಮನೆಗೆಂದು ಪೋಷಕರ ಮನೆಯಿಂದ ತೆರಳಿದ ರತ್ನ ನಾಪತ್ತೆಯಾಗಿದ್ದಾರೆ. ಈ ಕುರಿತು ಅವರ ಪೋಷಕರು ದೂರು ನೀಡಿದ್ದಾರೆ. ಮಾಹಿತಿ ದೊರೆತಲ್ಲಿ ಪೊಲೀಸ್ ಇಲಾಖೆಗೆ ತಿಳಿಸುವಂತೆ (ದೂ. 229000) ಇಲಾಖಾ ಪ್ರಕಟಣೆ ಕೋರಿದೆ.