ವೀರಾಜಪೇಟೆ, ಅ.2 : ನಗರದಲ್ಲಿ ಇಂದು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮುಂಜಾನೆ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ನಗರ ಸ್ವಚ್ಛತೆಯಲ್ಲಿ ತೊಡಗಿದ್ದ ವೇಳೆ ನಗರದ ಎಫ್.ಎಂ.ಸಿ ರಸ್ತೆಯಲ್ಲಿ ಬೋರೆಗೌಡ ಕಾಂಪ್ಲೆಕ್ಸ್ ಮುಂಭಾಗದ ಕಟ್ಟಡ ಮುಂದಿರುವ ಚರಂಡಿಯಲ್ಲಿ ಕಸ ತೆಗೆಯುವ ಸಂದರ್ಭದಲ್ಲಿ 55 ವರ್ಷ ಪ್ರಾಯದ ಪುರುಷನ ಮೃತ ದೇಹ ಪತ್ತೆಯಾಗಿದೆ.

ಪಂಚಾಯಿತಿ ಕಸ ಸಾಗಿಸುವ ವಾಹನದ ಚಾಲಕ ಮೋಹನ್ ಕುಮಾರ್ ಅವರು ನೀಡಿದ ದೂರಿನ ಮೇರೆÀಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಗುರುತು ಪತ್ತೆಯಾದಲ್ಲಿ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಿಸುವಂತೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃತ ಶರೀರ ಸರ್ಕಾರಿ ಅಸ್ಪತ್ರೆಯ ಶವಗಾರದಲ್ಲಿದೆ.