ಚೆಟ್ಟಳ್ಳಿ, ಅ. 2: ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ (ಕೆ.ಎಸ್.ಎಫ್.ಎ) ವತಿಯಿಂದ ಸೆಪ್ಟೆಂಬರ್ 22 ರಂದು ಬೆಂಗಳೂರಿನಲ್ಲಿ ನಡೆದ ಫುಟ್ಬಾಲ್ ತೀರ್ಪುಗಾರರ ಆಯ್ಕೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕೆ.ಎಸ್.ಎಫ್.ಎ. ಇದರ ಕ್ಯಾಟ್-5 ಫುಟ್ಬಾಲ್ ತೀರ್ಪು ಗಾರರಾಗಿ ಚೆಟ್ಟಳ್ಳಿ ಸಮೀಪದ ಕಂಡಕರೆಯ ಇಸ್ಮಾಯಿಲ್ ಆಯ್ಕೆಯಾಗಿದ್ದಾರೆ.