ಶನಿವಾರಸಂತೆ, ಅ. 2: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಎರಡೂವರೆ ವರ್ಷ ಸೇವೆ ಸಲ್ಲಿಸಿದ್ದ ಠಾಣಾಧಿಕಾರಿ ಎಂ.ಹೆಚ್. ಮರಿಸ್ವಾಮಿ ಅವರಿಗೆ ಇದೀಗ ವೀರಾಜಪೇಟೆ ನಗರ ಠಾಣೆಗೆ ವರ್ಗಾವಣೆಯಾಗಿದ್ದು, ಶನಿವಾರಸಂತೆ ಠಾಣೆಯಲ್ಲಿ ಪೊಲೀಸರು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು.
ವೃತ್ತ ನಿರೀಕ್ಷಕ ನಂಜುಂಡೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೀಗ ಶನಿವಾರಸಂತೆ ಪೊಲೀಸ್ ಠಾಣೆಗೆ ನೂತನ ಠಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಕೃಷ್ಣನಾಯಕ್, ಸಹಾಯಕ ಠಾಣಾಧಿಕಾರಿಗಳಾದ ಎಂ.ಹೆಚ್. ಗೋವಿಂದ್, ಶಿವಲಿಂಗ, ಈರಪ್ಪ ಹಾಗೂ ಪೊಲೀಸ್ ಸಿಬ್ಬಂದಿ, ಪತ್ರಕರ್ತ ನರೇಶ್ಚಂದ್ರ ಉಪಸ್ಥಿತರಿದ್ದರು. ಪೊಲೀಸ್ ಹೆಡ್ ಕಾನ್ಸ್ಟೇಬಲ್ ಬೋಪಣ್ಣ ಸ್ವಾಗತಿಸಿ, ವಂದಿಸಿದರು.