ಗೋಣಿಕೊಪ್ಪ ವರದಿ, ಅ. 2: ಪ.ಪೂ. ಶಿಕ್ಷಣ ಇಲಾಖೆ ಮತ್ತು ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪ್ರೀ ಯೂನಿವರ್ಸಿಟಿ ಕಾಲೇಜು ಸಹಯೋಗದಲ್ಲಿ ಸಿಐಟಿ ಕಾಲೇಜು ಆವರಣದಲ್ಲಿ ವೀರಾಜಪೇಟೆ ತಾಲೂಕು ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆ ನಡೆಯಿತು. ಕೊಡವ ಎಜುಕೇಷನ್ ಸೊಸೈಟಿ ಕಾರ್ಯಾಧ್ಯಕ್ಷ ಚೆರಿಯಪಂಡ ರಾಕೇಶ್ ಪೂವಯ್ಯ ಉದ್ಘಾಟಿಸಿದರು. ಪಿಯು ಪ್ರಾಂಶುಪಾಲೆ ಡಾ. ಸಣ್ಣುವಂಡ ರೋಹಿಣಿ ತಿಮ್ಮಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಹರೀಶ್ ಇದ್ದರು. ಬಾಲಕ ಮತ್ತು ಬಾಲಕಿಯರ ಎರಡು ವಿಭಾಗದ ಆರು ಆಟಗಾರರು ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು.
ಫಲಿತಾಂಶ: (ಕ್ರಮವಾಗಿ 6 ಸ್ಥಾನಗಳು) ಬಾಲಕರ ವಿಭಾಗದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜುವಿನ ಮುತ್ತಪ್ಪ, ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಕಾಲೇಜಿನ ತನುಶ್, ಧಯನ್ ಬೋಪಣ್ಣ, ಶಾನ್ ಗಣಪತಿ, ಪ್ರಣವ್ ತಿಮ್ಮಯ್ಯ, ಹಳ್ಳಿಗಟ್ಟು ಸಿಐಪಿಯು ಕಾಲೇಜಿನ ಶಶಾಂಕ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಬಾಲಕಿಯರ ವಿಭಾಗದಲ್ಲಿ ಹಳ್ಳಿಗಟ್ಟು ಸಿಐಪಿಯು ಕಾಲೇಜಿನ ಚೋಂದಮ್ಮ, ಶ್ರೀಮಂಗಲ ಸರ್ಕಾರಿ ಕಾಲೇಜುವಿನ ತ್ರಿಷಾ, ಕೂರ್ಗ್ ಪಬ್ಲಿಕ್ ಕಾಲೇಜಿನ ಸಮಿಕ್ಷಾ, ಸಿಐಪಿಯು ಕಾಲೇಜಿನ ನೀಲಮ್ಮ, ಶ್ರೀಮಂಗಲ ಕಾಲೇಜಿನ ವಿನಿಲಾ, ತುಳಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.