ಮಡಿಕೇರಿ, ಅ. 1: ನಗರದ ರಾಜಾಸೀಟ್ ಮಾರ್ಗವಾಗಿ ಕುಂದೂರುಮೊಟ್ಟೆ ದೇವಾಲಯದಿಂದ ವೆಬ್ಸ್ ಬಳಿಯ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಸಂಚರಿಸುವ ವಾಹನಗಳಿಗೆ ಅನುಕೂಲಕ್ಕಾಗಿ, ನಗರಸಭೆ ಹೊಸ ಬಡಾವಣೆ ಮುಖ್ಯರಸ್ತೆಗೆ ಕಾಯಕಲ್ಪ ಕಲ್ಪಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಈ ಮಾರ್ಗದ ಅಲ್ಲಲ್ಲಿ ರಸ್ತೆ ಬದಿಯ ಮಣ್ಣು ತೆರವುಗೊಳಿಸಿ ವಿಸ್ತರಿಸುವ ಪರಿಣಾಮ, ಮಳೆಯಿಂದ ಇನ್ನಷ್ಟು ಜರಿದಿರುವ ಮಣ್ಣು ರಸ್ತೆಯಲ್ಲೇ ಇದ್ದು, ಇತರ ವಾಹನಗಳಿಗೆ ಬಸ್‍ಗಳು ಎದುರುಗೊಳ್ಳುವಾಗ ತೀವ್ರ ಅಡಚಣೆಯಾಗುತ್ತಿದೆ ಎಂದು ಅನೇಕ ಹಿರಿಯ ನಾಗರಿಕರು ‘ಶಕ್ತಿ’ಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಸರಾ ಸಂದರ್ಭ ಹೆಚ್ಚಿನ ವಾಹನಗಳೊಂದಿಗೆ ಪಾದಚಾರಿ ಗಳಿಗೂ ತೊಂದರೆಯಾಗದಂತೆ ನಗರಸಭೆ ಆಡಳಿತ ಕ್ರಮಕೈಗೊಂಡು, ರಸ್ತೆಗೆ ಕಾಯಕಲ್ಪ ನೀಡಬೇಕೆಂದು ಒತ್ತಾಯಿಸಿದ್ದಾರೆ.