ಕಡಂಗ, ಅ. 1: ಕಡಂಗ ಎಸ್.ವೈ.ಎಸ್. ಶಾಖೆಯ ವಾರ್ಷಿಕ ಮಹಾಸಭೆ ಬದ್ರಿಯ ಜುಮಾ ಮಸೀದಿಯ ಖತೀಬ್ ಉಸ್ತಾದ ಹ್ಯಾರಿಸ್ ಸಕಾಫಿ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇರಳ ರಾಜ್ಯ ಎಸ್.ವೈ.ಎಸ್. ನಾಯಕ ಬಷೀರ್ ಉಸ್ತಾದ್ ಚೆರುಪೇ ಮುಖ್ಯ ಭಾಷಣ ಮಾಡಿ, ಎಸ್.ವೈ.ಎಸ್.ನ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ಸಭೆಯಲ್ಲಿ ನೂತನ ಆಡಳಿತ ಮಂಡಳಿ ಸದಸ್ಯರನ್ನು ಆರಿಸಲಾಯಿತು. ಅಧ್ಯಕರಾಗಿ ಸುಲೈಮಾನ್ ಸಿ.ಎಂ., ಉಪಾಧ್ಯಕ್ಷ ಮಮ್ಮುಟಿ ಪಿ.ಸಿ., ಕಾರ್ಯದರ್ಶಿ ಸಲಾಂ ಯು.ಎಂ., ಖಚಾಂಚಿಯಾಗಿ ರಜಾಕ್ ಸಿ.ಎ. ಅವರನ್ನು ಆಯ್ಕೆ ಮಾಡಲಾಯಿತು.
ಸನ್ಮಾನ: ಕಳೆದ ವರ್ಷದ ಪ್ರವಾಹ ಸಂದರ್ಭ ಸಂತ್ರಸ್ತರಿಗೆ ಆಹಾರ ಮತ್ತು ವಾಹನ ಸೌಲಭ್ಯಗಳನ್ನು ನೀಡಿ ಸಹಕರಿಸಿದ ಎಸ್. ವೈ.ಎಸ್. ಕಾರ್ಯಕರ್ತ ರಂಷೀದ್ ಮತ್ತು ಆಶಿಕ್‍ರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.