ವೀರಾಜಪೇಟೆ, ಅ. 1: ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್‍ನಿಂದ ಈ ಬಾರಿ ಬ್ಯಾಂಕ್‍ನ ಸದಸ್ಯರುಗಳಿಗೆ ಶೇ. 9 ರಷ್ಟು ಡಿವಿಡೆಂಡ್ ನೀಡಲಾಗುವದು.
ಬ್ಯಾಂಕನ್ನು ಇನ್ನಷ್ಟು ಪ್ರಗತಿಗೆ ಸದಸ್ಯರುಗಳು ಪರಸ್ಪರ ಸಹಕರಿಸ ಬೇಕೆಂದು ಆಡಳಿತ ಮಂಡಳಿ ಅಧ್ಯಕ್ಷ ಕರ್ನಂಡ ಎಂ. ಸೋಮಯ್ಯ ಹೇಳಿದರು.
ಇತ್ತೀಚೆಗೆ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸೋಮಯ್ಯ ಅವರು ಆರ್.ಬಿ.ಐ. ಅನುಮತಿ ಮೇರೆಗೆ ಡಿವಿಡೆಂಡ್ ನೀಡಲಾಗು ವದು. ಬ್ಯಾಂಕ್ ವರದಿ ಸಾಲಿನಲ್ಲಿ ರೂ. 32,34,363 ನಿವ್ವಳ ಲಾಭಗಳಿಸಿ ಪ್ರಗತಿ ಪಥದಲ್ಲಿದೆ ಎಂದರು.
ಮಾಜಿ ಅಧ್ಯಕ್ಷ ಕೆ.ಡಬ್ಲ್ಯು. ಬೋಪಯ್ಯ ಅವರು ಮಾತನಾಡಿ ಬ್ಯಾಂಕ್‍ನ ಅಧ್ಯಕ್ಷ ಕೆ.ಎಂ. ಸೋಮಯ್ಯ ಅವರು ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಸೇವೆಗಾಗಿ ಕೊಡಗು ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟವು ಸಹಕಾರ ಕ್ಷೇತ್ರದ ‘ಉತ್ತಮ ಸಹಕಾರಿ’ ಎಂದು ಪ್ರಶಸ್ತಿ ನೀಡಿ ಗೌರವಿಸಿರುವದನ್ನು ಬ್ಯಾಂಕ್‍ನ ಆಡಳಿತ ಮಂಡಳಿ ಸ್ವಾಗತಿಸುತ್ತದೆ. ಬ್ಯಾಂಕ್‍ನಿಂದ ಎಲ್ಲ ರೀತಿಯ ಸಾಲ ಪಡೆದವರು ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡಿದರೆ ಬ್ಯಾಂಕ್ ಪ್ರಗತಿ ಪಥದತ್ತ ಸಾಗಲು ಸಾಧ್ಯವಾಗಲಿದೆ ಎಂದು ಹೇಳಿದರು. ಬ್ಯಾಂಕ್‍ನ ಸಭಾಂಗಣದಲ್ಲಿ ನಡೆದ ಸಭೆಯ ವೇದಿಕೆಯಲ್ಲಿ ಉಪಾಧ್ಯಕ್ಷ ಕೆ.ಎಂ. ಚರ್ಮಣ, ನಿರ್ದೇಶಕರುಗಳಾದ ಎಂ.ಎಂ. ನಂಜಪ್ಪ, ಕೆ.ಬಿ. ಪ್ರತಾಪ್, ಪಿ.ಎಂ. ರಚನ್, ಎಂ.ಪಿ. ಕಾಶಿ ಕಾವೇರಪ್ಪ, ಎಂ.ಎನ್. ಪೂಣಚ್ಚ, ವಿ.ಪಿ. ರಮೇಶ್, ಎಂ.ಕೆ. ದೇವಯ್ಯ, ಹೆಚ್.ಸಿ. ಮುತ್ತಮ್ಮ, ಎಸ್.ಪಿ. ಜುಬಿನ, ಐ.ಎಂ. ಕಾವೇರಮ್ಮ, ಡಿ.ಎಂ. ರಾಜ್‍ಕುಮಾರ್, ಅಬ್ದುಲ್ ರೆಹಮಾನ್ ಹಾಗೂ ವ್ಯವಸ್ಥಾಪಕ ಸಿ.ಎಸ್. ಪ್ರಕಾಶ್ ಉಪಸ್ಥಿತರಿದ್ದರು.