ಶನಿವಾರಸಂತೆ, ಅ. 1: ಸಮೀಪದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆಯಿಂದ ಬಿಳಿಯ ಕ್ಯಾನ್ವಾಸ್ ಶೂ ಮತ್ತು ಸಾಕ್ಸ್‍ಗಳನ್ನು ಹಾಗೂ ಪ್ರಥಮ ಚಿಕಿತ್ಸೆ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.
ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನದಂದು ಕಾರ್ಯಕ್ರಮ ಆಯೋಜಿಸಿದ್ದ ರೋಟರಿ ಸಂಸ್ಥೆ ವಿದ್ಯಾರ್ಥಿಗಳು ಬರಿಗಾಲಿನಿಂದ ಅಡ್ಡಾಡುವದರಿಂದ ಮಣ್ಣಿನಲ್ಲಿರುವ ಜಂತುಹುಳುವಿನ ಲಾರ್ವಗಳು ದೇಹಕ್ಕೆ ಸೇರಿ ಅನೇಕ ಸಮಸ್ಯೆಗಳಿಗೆ ಈಡು ಮಾಡುತ್ತವೆ. ಈ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಆಲೂರು ಸಿದ್ದಾಪುರ ವೈದ್ಯಾಧಿಕಾರಿ ಡಾ. ಸುಪರ್ಣ ಅವರ ಮಾರ್ಗದರ್ಶನದಲ್ಲಿ ರೋಟರಿ ಪದಾಧಿಕಾರಿಗಳು ಶಾಲೆಯ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ವಿತರಿಸಿದರು.
ರೋಟರಿ ಅಧ್ಯಕ್ಷ ಶುಭು, ಕಾರ್ಯದರ್ಶಿ ಚಂದನ್, ವಲಯ ಸೇನಾನಿ ವಸಂತ್ ಕುಮಾರ್ ಹಾಗೂ ಶ್ವೇತಾ ವಸಂತ್, ಮೋಹನ್ ಯೋಗೇಶ್ ಸುದೀಪ್ ಆರೋಗ್ಯ ಕಾರ್ಯಕರ್ತೆ ಸ್ವಾತಿ ಉಪಸ್ಥಿತರಿದ್ದರು.