ವೀರಾಜಪೇಟೆ, ಅ. 1: ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಲಭಿಸಿದ ಶಿಕ್ಷಕರುಗಳಿಗೆ ರಾಜ್ಯ ಸರಕಾರವು ಗೌರವಧನ ಹಾಗೂ ಉಚಿತ ಬಸ್ ಪ್ರಯಾಣದ ಸೌಲಭ್ಯ ಒದಗಿಸಿದ್ದು, ಈ ಬಗ್ಗೆ ಅರ್ಹ ಶಿಕ್ಷಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ದೃಢೀಕರಣದೊಂದಿಗೆ ಕೊಡಗು ನಿವೃತ್ತ ಉದ್ಯೋಗಸ್ಥರ ಸಂಘದ ಕಚೇರಿಗೆ ತಲಪಿಸುವಂತೆ ಕೋರಲಾಗಿದೆ.
ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಪದಾಧಿಕಾರಿಗಳ ಮೊ. 9980000523 ಅಥವಾ ಮೊ. 9449920849 ದೂರವಾಣಿ ಸಂಪರ್ಕಿಸಬಹುದಾಗಿದೆ.