ಮಡಿಕೇರಿ, ಅ. 1: ಬಾಳೆಲೆ ಕೊಡಗು ಸ್ಪೋಟ್ರ್ಸ್ ಮತ್ತು ರಿಕ್ರೀಷನ್ ಕ್ಲಬ್‍ನ ವತಿಯಿಂದ ಬಾಳೆಲೆ ಕೊಡವ ಸಮಾಜದಲ್ಲಿ ಸಂತೋಷ ಕೂಟವನ್ನು ಸಂಸ್ಥೆಯ ಅಧ್ಯಕ್ಷ ಆದೇಂಗಡ ಕೆ. ಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಆಟ್ ಪಾಟ್, ಸಾಂಸ್ಕøತಿಕ ಕಾರ್ಯಕ್ರಮ, ಆಚಾರ - ವಿಚಾರ, ಪ್ರೀತಿ ವಿಶ್ವಾಸದೊಂದಿಗೆ ಪ್ರತಿ ಹಬ್ಬವನ್ನು ನಿರಂತರವಾಗಿ ಎಲ್ಲರೂ ಒಂದಾಗಿ ಕೊಡವರು ನಡೆಸಬೇಕೆಂದು ಅಧ್ಯಕ್ಷರು ಸಲಹೆಯಿತ್ತರು. ಆರಂಭದಲ್ಲಿ ಆಯುಧಪೂಜೆಯನ್ನು ಮಾಡಿ ಗುರುಕಾರೋಣವನ್ನು ಸ್ಮರಿಸಲಾಯಿತು. ಬಳಿಕ ಹಲವಾರು ಕ್ರೀಡಾ ಪೈಪೋಟಿಯನ್ನು ಆಯೋಜಿಸಲಾಗಿತ್ತು. ತೆಂಗಿನಕಾಯಿಗೆ ಗುಂಡು ಹೊಡೆಯುವದರಲ್ಲಿ ಮಚ್ಚಮಾಡ ಅಯ್ಯಪ್ಪ, ಚಿರಿಯಪಂಡ ಬಬೀಸ್, ಗಂಡಸರ ವಾಲಗದ ಡ್ಯಾನ್ಸ್‍ನಲ್ಲಿ ಅಡ್ಡೇಂಗಡ ಆದರ್ಶ್, ಪಾರುವಂಗಡ ರಘು ನಂಜಪ್ಪ, ಹೆಂಗಸರ ವಾಲಗದ ನೃತ್ಯದಲ್ಲಿ ಮಾಚಂಗಡ ಸರಿತಾ ರೋಷನ್, ಅಡ್ಡೇಂಗಡ ಗ್ರೀಷ್ಮಾ ಅಜಯ್, ಗಂಡ - ಹೆಂಡತಿ ಜೋಡಿ ಡ್ಯಾನ್ಸ್‍ನಲ್ಲಿ ಅಳಮೇಂಗಡ ಚಂಗಪ್ಪ ಮತ್ತು ಶಶಿ, ಮಾಚಂಗಡ ರೋಷನ್ ಮತ್ತು ಸರಿತಾ ಇವರುಗಳು ಬಹುಮಾನ ಪಡೆದುಕೊಂಡರು.