ಕೂಡಿಗೆ, ಸೆ. 30: ಸಮೀಪದ ತೊರೆನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಿದ್ಧಲಿಂಗಪುರ ಗ್ರಾಮದಲ್ಲಿ ನವರಾತ್ರಿಯ ಅಂಗವಾಗಿ ನವರಾತ್ರಿ ಪೂಜೋತ್ಸವ ಮತ್ತು ಶತಚಂಡಿಕಾ ಯಾಗವು ಅ.3 ರಂದು ಸಿದ್ಧಲಿಂಗಪುರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ.
ಸಿದ್ಧಲಿಂಗಪುರದ ನಾಪಂಡ ಬೋಜಮ್ಮ ಮತ್ತು ಕುಟುಂಬದವರು ಪ್ರತಿವರ್ಷವು ಆಯೋಜಿಸಿಕೊಂಡು ಬರುತ್ತಿರುವ ಶತಚಂಡಿಕಾಯಾಗವು ಮರ್ಕಂಜ ಯೋಗೀಶ್ವರ ಮಠದ ಶ್ರೀ ರಾಜೇಶ್‍ನಾಥ್‍ಜೀ ಅವರ ಆಶೀರ್ವಾದದೊಂದಿಗೆ, ನರೇಂದ್ರ ನಾಥ ಅವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಶ್ರೀನಿವಾಸ್ ಭಾಯರಿ ಅವರ ಪ್ರಧಾನ ಆಚಾರ್ಯತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಹೋಮ ಹವನಗಳು ನಡೆಯಲಿವೆ ಎಂದು ಪೂಜೆಯ ಆಯೋಜಕರಾದ ನಾಪಂಡ ಮುತ್ತಪ್ಪ ಮತ್ತು ನಾಪಂಡ ಮುದ್ದಪ್ಪ ತಿಳಿಸಿದ್ದಾರೆ.