ಮಡಿಕೇರಿ, ಸೆ. 30: 37ನೇ ಅಖಿಲ ಕರ್ನಾಟಕ ಇಎನ್‍ಟಿ ತಜ್ಞರ ಸಮಾವೇಶವು ಸೆ. 27 ರಂದು ಮಡಿಕೇರಿಯಲ್ಲಿ ಉದ್ಘಾಟನೆಗೊಂಡು 3 ದಿನಗಳ ಕಾಲ ನಡೆಯಿತು.

ಕೊಡಗು ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ವನ್ನು ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಕುಲ ಸಚಿವ ಲಿಂಗೇಗೌಡ, ರಾಷ್ಟ್ರೀಯ ಇಎನ್‍ಟಿ ಸಂಘಟನೆಯ ಅಧ್ಯಕ್ಷ ಡಾ. ಸತ್ಯಪ್ರಕಾಶ್ ದುಬೆ, ಕೊಡಗು ವೈದ್ಯಕೀಯ ಸಂಸ್ಥೆಯ ಮಾಜಿ ಡೀನ್ ಡಾ. ಮಹೇಂದ್ರ, ಹಿರಿಯ ಇಎನ್‍ಟಿ ತಜ್ಞರಾದ ಡಾ. ದೇವಯ್ಯ, ಡಾ. ದೀಪಕ್ ಹಂಡ್ಲಿಪುರ್, ಕೊಡಗು ವೈದ್ಯಕೀಯ ಸಂಸ್ಥೆಯ ಡೀನ್ ಡಾ. ಕಾರ್ಯಪ್ಪ, ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್, ಮೆಡಿಕಲ್ ಸೂಪರಿಟೆಂಡೆಂಟ್ ಡಾ. ಲೋಕೇಶ್, ಸಿಇಓ ಮೇರಿ ನಾಣಯ್ಯ, ಸಮಾವೇಶದ ಸಂಘಟನಾ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ, ಸಂಘಟನಾ ಕಾರ್ಯದರ್ಶಿ ಡಾ. ಶ್ವೇತ ಹಾಗೂ ಇತರರು ಉದ್ಘಾಟಿಸಿದರು.