ಗೋಣಿಕೊಪ್ಪ ವರದಿ, ಸೆ. 29: 41 ನೇ ವರ್ಷದ ಗೋಣಿಕೊಪ್ಪ ದಸರಾ ಉತ್ಸವಕ್ಕೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಿರುವ ಕಾವೇರಿ ಕಲಾ ವೇದಿಕೆಯ ಸಮೀಪವಿರುವ ಮಂಟಪದಲ್ಲಿ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಗಣಪತಿ ಹೋಮ, ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿ ಪರಹಿತನಂದಾಜಿ ಮಹರಾಜ್ ಚಾಮುಂಡೇಶ್ವರಿ ದೇವಿಯ ಗೋಣಿಕೊಪ್ಪ ವರದಿ, ಸೆ. 29: 41 ನೇ ವರ್ಷದ ಗೋಣಿಕೊಪ್ಪ ದಸರಾ ಉತ್ಸವಕ್ಕೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಿರುವ ಕಾವೇರಿ ಕಲಾ ವೇದಿಕೆಯ ಸಮೀಪವಿರುವ ಮಂಟಪದಲ್ಲಿ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಗಣಪತಿ ಹೋಮ, ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿ ಪರಹಿತನಂದಾಜಿ ಮಹರಾಜ್ ಚಾಮುಂಡೇಶ್ವರಿ ದೇವಿಯ ಪೂಜಾ ಸಮಿತಿ ಸದಸ್ಯರಾದ ಡಾ. ಚಂದ್ರಶೇಖರ್, ಡಾ. ಚಂದ್ರಶೇಖರ್, ಸುಮಿ ಸುಬ್ಬಯ್ಯ, ಗ್ರಾ. ಪಂ. ಅಧ್ಯಕ್ಷೆ ಸೆಲ್ವಿ, ಸಮಿತಿ ಹಿರಿಯ ಸದಸ್ಯ ಕೆ. ರಾಮಾಚಾರ್ ಪೂಜೆಯಲ್ಲಿ ಪಾಲ್ಗೊಂಡರು. ವಿಗ್ರಹ ದಾನಿ ಕುಟುಂಬ (ಮೊದಲ ಪುಟದಿಂದ) ಸದಸ್ಯರಾದ ಕೇಶವ್ ಕಾಮತ್, ಪ್ರಮೋದ್ ಕಾಮತ್ ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡರು. 10 ದಿನ ನಡೆಯುವ ಕಾರ್ಯಕ್ರಮ ಪಟ್ಟಿ ಹಾಗೂ ದಸರಾ ಆಚರಣೆ ಆ್ಯಪ್‍ನ್ನು ಶಾಸಕ ಕೆ. ಜಿ. ಬೋಪಯ್ಯ ಬಿಡುಗಡೆಗೊಳಿಸಿ ದರು.

ಇಂದಿನ ಕಾರ್ಯಕ್ರಮ

ತಾ.30 ರಂದು (ಇಂದು) ಸಂಜೆಯ ಸ್ಥಳೀಯ ಕಾರ್ಯಕ್ರಮವಾಗಿ ಅಮ್ಮತ್ತಿ ಹೇಮಾವತಿ ನಾಟ್ಯಾಲಯ ತಂಡದ ಭರತ ನಾಟ್ಯ, ಪಾಶ್ಚಾತ್ಯ ನೃತ್ಯ, ಸುರಕ್ಷಾ ತಂಡದ ಭರತನಾಟ್ಯ, ಶ್ರೀಹರಿ ತಂಡದ ಹಾಡಿನೊಳಗೆ ಹಾಸ್ಯ ಕಾರ್ಯಕ್ರಮವಿದೆ.