ಮಡಿಕೇರಿ, ಸೆ. 29: ದಸರಾ ಪ್ರಯುಕ್ತ ಮಡಿಕೇರಿ ದಸರಾ ಕ್ರೀಡಾ ಸಮಿತಿ ವತಿಯಿಂದ ನಗರದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಚಾಲನೆ ನೀಡಿದರು.20ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಪುರುಷರ ವಿಭಾಗದಲ್ಲಿ ಆಪಟೀರ ಅಯ್ಯಪ್ಪ (ಪ್ರ), ಪಡೆಯಂಡ ನಂದ (ದ್ವಿ), ಕಬ್ಬಚೀರ ಶರತ್ (ತೃ), ಮಹಿಳೆಯರ ವಿಭಾಗದಲ್ಲಿ ಚಿಯಕ್‍ಪೂವಂಡ ಶ್ವೇತಾ ಚಂಗಪ್ಪ (ಪ್ರ), ಹೇಮಾ ಪೊನ್ನಪ್ಪ (ದ್ವಿ) ಸ್ಥಾನ ಗಳಿಸಿಕೊಂಡರು.ಈ ಸಂದರ್ಭ ಕ್ರೀಡಾ ಸಮಿತಿ ಅಧ್ಯಕ್ಷ ಹರೀಶ್, ಪ್ರಧಾನ ಕಾರ್ಯದರ್ಶಿ ಕಪಿಲ್, ಸದಸ್ಯ ಪೊನ್ನಚ್ಚನ ಮಧು ಸೇರಿದಂತೆ ಸಮಿತಿ ಪ್ರಮುಖರು ಹಾಜರಿದ್ದರು.