ಶ್ರೀಮಂಗಲ, ಸೆ. 29: ಪ್ರತಿಷ್ಠಿತ ಸಾಹಿತ್ಯ ಸಂಸ್ಥೆಯಾದ ಕೊಡವ ತಕ್ಕ್ ಎಳ್ತ್‍ಕಾರಡ ಕೂಟವು ತನ್ನ 25ನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದು, ‘ಕೂಟ’ದ ಬೆಳ್ಳಿ ಹಬ್ಬದ ಅಂಗವಾಗಿ 25 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗಾಗಲೇ ಮೂರು ಕಾರ್ಯಕ್ರಮಗಳು ಮುಗಿದಿದ್ದು 4ನೇ, 5ನೇ 6ನೇ ಹಾಗೂ 7ನೇ ಕಾರ್ಯಕ್ರಮವಾಗಿ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಕೊಡವ ಭಾಷೆಯ ರಸಪ್ರಶ್ನೆ, ಪ್ರಬಂಧ, ಕೈಬರಹ ಹಾಗೂ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಪ್ರತಿಯೊಂದು ಸ್ಪರ್ಧೆಗೆ ಒಂದು ಶಾಲೆಯಿಂದ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಭಾಗವಹಿಸುವ ಸ್ಪರ್ಧೆ ಹಾಗೂ ಹೆಸರನ್ನು ದಿನಾಂಕ 30 ರ ಒಳಗೆ ನೊಂದಾಯಿಸಿಕೊಳ್ಳಬೇಕು. ಸ್ಪರ್ಧೆಗಳು ಅಕ್ಟೋಬರ್ 3ನೇ ತಾರೀಖಿನಂದು ಬೆಳಿಗ್ಗೆ 10 ಗಂಟೆಗೆ ವೀರಾಜಪೇಟೆಯ ತ್ರಿವೇಣಿ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಾ. 3 ರಂದು ಬೆಳಿಗ್ಗೆ 9.30 ಗಂಟೆಗೆ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರ ಅನುಮತಿ ಪತ್ರದೊಂದಿಗೆ ಹಾಜರಿರಬೇಕು.
ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು:
1. ಕೊಡಗ್‍ರ ಪ್ರಕೃತಿ - ಪರಿಸರ ಉಳ್‍ತುವಕ್ ನಂಗಡ ಜವಾಬ್ದಾರಿ, 2. ಕೊಡವ ಭಾಷೆನ ಬೊಳ್‍ತುವ ಬಟ್ಟೆ 3.ಕೊಡವ ಸಂಸ್ಕøತಿನ ಉಳ್‍ತಿ ಬೊಳತುವ ಬಟ್ಟೆ 4. ಕೊಡವಾಮೆ ಕೊತ್ತನೆಕೆ ಮಕ್ಕಳ ಬೊಳ್‍ತುವಲ್ಲಿ ಅಪ್ಪವ್ವÀಂಗಡ ಜವಬ್ದಾರಿ 5. ಸಾಮಾಜಿಕ ಜಾಲತಾಣತ್ ಕೊಡವತಕ್ಕ್‍ನ ಬೊಳ್‍ತುವ 6. ಕೊಡವ ಪದ್ಧತಿರ ಸುಧಾರಣೆ 7. ಕೊಡವ ನಮ್ಮೆನಾಳ್‍ರ ಭೀರ್ಯತ್‍ನ ಕಾತವದೆನ್ನನೆ 8. ಕೊಡವ ಸಾಹಿತ್ಯ ಬೊಳಚೆ ಎನ್ನನೆ
ಈ 8 ವಿಷಯಗಳ ಪೈಕಿ ಒಂದು ವಿಷಯಕ್ಕೆ 500 ಶಬ್ದ ಮೀರದಂತೆ ಪ್ರಬಂಧವನ್ನು ಸ್ಪರ್ಧೆ ನಡೆಯುವ ಸ್ಥಳದಲ್ಲೆ ಬರೆಯಬೇಕು.
ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು:
1. ಅಳ್‍ಂಜಂಡುಳ್ಳ ಕೊಡವ ಸಂಸ್ಕøತಿ 2. ಪರೆಯ ಕಳಿ 3. ಕೊಡವ ನಮ್ಮೆ 4.ಕೊಡಗ್‍ರ ಪ್ರಕೃತಿ- ಪರಿಸರ 5.ಕೊಡವ ಮಂಗಲಕಾರಂಡ ಉಡ್‍ಪು, ಮಾಲ್ ಮಟ 6.ಕೊಡವ ಮಂಗಲಕಾರ್ತಿರ ಉಡ್‍ಪು, ಮಾಲ್ ಮಟ 7. ಕಾವೇರಮ್ಮೆ. ಈ 7 ವಿಷಯಗಳ ಪೈಕಿ ಒಂದು ವಿಷಯದ ಬಗ್ಗೆ ನಿಗದಿ ಪಡಿಸಿದ ಸಮಯದೊಳಗೆ ಸ್ಪರ್ಧೆ ನಡೆಯುವ ಸ್ಥಳದಲ್ಲೆ ಚಿತ್ರ ಬಿಡಿಸುವದು.
ಕೈ ಬರಹ ಸ್ಪರ್ಧೆಯು ನಿಗದಿಪಡಿಸಿದ ಸ್ಪರ್ಧಾ ಸ್ಥಳದಲ್ಲಿ ನಡೆಯಲಿದ್ದು, ಅಲ್ಲಿಯೇ ಹೇಳುವ ವಿಷಯವನ್ನು ಸ್ಫುಟವಾಗಿ ಕೈ ಬರಹ ಬರೆಯಬೇಕು. ರಸಪ್ರಶ್ನೆ ಸ್ಫರ್ಧೆಯಲ್ಲಿ ಕೇಳುವ ಪ್ರಶ್ನೆಗೆ ನಿಗದಿತ ಸಮಯದೊಳಗೆ ಸ್ಥಳದಲ್ಲೇ ಉತ್ತರಿಸಬೇಕು.
ಹೆಚ್ಚಿನ ಮಾಹಿತಿಗೆ ಅಧ್ಯಕ್ಷರು/ ಕಾರ್ಯದರ್ಶಿ, ಕೊಡವತಕ್ಕ್ ಎಳ್ತ್‍ಕಾರಡ ಕೂಟ, ಅ/ಔ ಸ್ಟುಡೆಂಟ್ ವಲ್ರ್ಡ್ ಸ್ಟೇಷನರಿ, ಆತ್ರೇಯ ಆಸ್ಪತ್ರೆಯ ಎದುರು, ವೀರಾಜಪೇಟೆ. ಈ ವಿಳಾಸದಲ್ಲಿ ಅಥವಾ ದೂರವಾಣಿ 9448582398, 9448326014, 9880584732 ಸಂಖ್ಯೆಗಳನ್ನು ಸಂಪರ್ಕಿಸಬಹುದೆಂದು “ಕೂಟ”ದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್‍ಚಂಗಪ್ಪ ತಿಳಿಸಿದ್ದಾರೆ.