ಮಡಿಕೇರಿ, ಸೆ. 29: ಹಳ್ಳಿಗಟ್ಟುವಿನ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎರಡು ದಿನದ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಕಾಲೇಜಿನ ಸಭಾಂಗಣದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಯಿತು. ಸಂಶೋಧನಾ ಮನೋವೃತ್ತಿಯನ್ನು ಬೆಳೆಸುವ ಹಿತಾದೃಷ್ಠಿಯನ್ನು ಈ ಕಾರ್ಯಾಗಾರ ನಡೆಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಡವ ಎಜುಕೇಷನ್ ಸೊಸೈಟಿಯ ನಿರ್ದೇಶಕಿ ಡಾ. ಶಾಂತಿಮಾಚಯ್ಯ ಸಂಶೋಧನೆಯ ಮಹತ್ವ ಮತ್ತು ಕಾಲಗುಣಕ್ಕೆ ಹೊಂದಿಕೊಂಡು ಬೋಧನೆಯಲ್ಲಿ ಸಂಶೋಧನಾ ವಿಧಾನವನ್ನು ಅಳವಡಿಸಿಕೊಳ್ಳುವ ಬಗ್ಗೆ ಮಾತನಾಡಿದರು.

ಪ್ರಾಂಶುಪಾಲೆ ಡಾ. ಕವಿತ ಹಾಗೂ ಸಮಿತಿಯ ಆಯೋಜಕಿ ಡಾ. ರೋಹಿಣಿ ತಿಮ್ಮಯ್ಯ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಡಾ. ನಿತಿನ್ ಕಾರ್ಯಾಗಾರವನ್ನು ಉದ್ದೇಶಿಸಿ ಸಂಶೋಧನೆಯಲ್ಲಿ ಯಾವ ವಿಧಾನವನ್ನು ಅಳವಡಿಸಿಕೊಳ್ಳಬೇಕು ಮತ್ತು ಅಡಿಟಿಪ್ಪಣಿಯ ಮಹತ್ವವನ್ನು ತಿಳಿಸಿಕೊಟ್ಟರು. ಡಾ. ರಾಮಶೇಷ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.

ಪ್ರಾಧ್ಯಾಪಕ ಡಾ. ಸುರೇಶ್ ಸಂಶೋಧನಾ ಲೇಖನಗಳ ಪ್ರಕಟನೆಗೆ ಸಂಬಂಧಿಸಿದಂತೆ ವಿಚಾರವನ್ನು ಮಂಡಿಸಿದರು. ಮೈಸೂರು ಕಾಲೇಜಿನ ಪ್ರಾಧ್ಯಾಪಕಿ ಡಾ. ಪುಷ್ಪಲತ ಮಾಹಿತಿ ನೀಡಿದರು.

ಬೋಧಕ ವರ್ಗದವರಲ್ಲಿ ಸಂಶೋಧನೆಯ ಪ್ರವೃತಿ ಬೆಳೆಸುವ ಮೂಲಕ ಸಕ್ರೀಯವಾಗಿ ಬೋಧನೆಯ ಜೊತೆಗೆ ಸಂಶೋಧನೆಯಲ್ಲಿ ಪಾಲ್ಗೊಳ್ಳುವಂತೆ ಈ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.ಭಾಗಮಂಡಲ: ಸಮೀಪದ ಚೆಟ್ಟಿಮಾನಿ ಗ್ರಾಮದ ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳಾದ ಎಂ.ಬಿ. ಶಿವಾನಿ, ಎ.ಎಂ. ಮುತ್ತಣ್ಣ, ಕೆ.ಆರ್. ದಿಶಾಂತ್, ಎಂ.ಎ. ಅಫ್ಲಹಃ ಮತ್ತು ಹೆಚ್.ಪಿ. ಶ್ರೀನಿವಾಸ್, ಕುಂಗ್‍ಫೂ ಇಂಟರ್‍ನ್ಯಾಷನಲ್ ವತಿಯಿಂದ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕುಂಗ್‍ಫೂ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಮುಂದಿನ ಹಂತ ಪ್ರವೇಶಿಸಿದ್ದಾರೆ. ಕುಂಗ್‍ಫೂ ತರಬೇತು ನಾಟೋಳಂಡ ನಂಜುಂಡ ಮಾರ್ಗದರ್ಶನದಲ್ಲಿ ತರಬೇತಿಯನ್ನು ಹೊಂದಿದ್ದು, ಚೆನ್ನೈ ಮೂಲದ ಗಂಗಾಧರ್ ಮತ್ತು ದೇವರಾಜ್ ನೇತೃತ್ವದಲ್ಲಿ ಪರೀಕ್ಷೆ ನಡೆಯಿತು.ಕುಶಾಲನಗರ: ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ಜಲಶಕ್ತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಂಗವಾಗಿ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾಗೃತಿ ಜಾಥಾ ನಡೆಯಿತು.

ಈ ಸಂದರ್ಭ ಪ.ಪಂ. ಸದಸ್ಯರಾದ ಅಮೃತ್‍ರಾಜ್, ಪ್ರಮೋದ್ ಮುತ್ತಪ್ಪ, ಜಗದೀಶ್, ಜಯವರ್ಧನ, ಮುಖ್ಯಾಧಿಕಾರಿ ಸುಜಯ್‍ಕುಮಾರ್, ಆರೋಗ್ಯಾಧಿಕಾರಿ ಉದಯ್‍ಕುಮಾರ್, ಕಾಲೇಜು ಶಿಕ್ಷಕ ವೃಂದ, ಪಂಚಾಯಿತಿ ಪೌರ ಕಾರ್ಮಿಕರು ಇದ್ದರು.

ನಂತರ ಕಾಲೇಜಿನಲ್ಲಿ ಜಲಶಕ್ತಿ ಅಭಿಯಾನ ಬಗ್ಗೆ ಸಭಾ ಕಾರ್ಯಕ್ರಮ ನಡೆಯಿತು.