ಮಡಿಕೇರಿ, ಸೆ. 29: ಶನಿವಾರಸಂತೆಯ ನಮ್ಮ ಬೆಳೆಗಾರರ ಸ್ವಸಹಾಯ ಸಂಘ, ಕರ್ನಾಟಕ ಬೆಳೆಗಾರರ ಒಕ್ಕೂಟದ ಕೊಡಗು ಶಾಖೆಯ ವತಿಯಿಂದ ಅ. 1 ರಂದು ಶನಿವಾರಸಂತೆಯಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಆಯೋಜಿಸಲ್ಪಟ್ಟಿದೆ.

ಅಂದು ಬೆಳಗ್ಗೆ 10 ಗಂಟೆಗೆ ಶನಿವಾರಸಂತೆಯ ಗುಡುಗಳಲೆ ಶ್ರೀ ಮಂಜುನಾಥ ಪೆಟ್ರೋಲ್ ಬಂಕ್ ಬಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಹಾಸನದ ಜಂಟಿ ನಿರ್ದೇಶಕ ಗುಡ್ಡೇಗೌಡ ಮಾಹಿತಿ ನೀಡಲಿದ್ದಾರೆ.

ಜಿಲ್ಲಾ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್, ಮಂಡಳಿ ಉಪನಿರ್ದೇಶಕ ಶಿವಕುಮಾರಸ್ವಾಮಿ, ಮುರಳೀಧರ್ ಇವರುಗಳು ಮಾಹಿತಿ ನೀಡಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.