ಕುಶಾಲನಗರ, ಸೆ. 29: ದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕಾಗಿ ದೇಶಾದ್ಯಂತ ಸಮಾನ ನಾಗರಿಕ ಕಾನೂನು ಜಾರಿಗೆ ಒತ್ತಾಯಿಸಿ ಕುಶಾಲನಗರದ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಜಾಗೃತಿ ಆಂದೋಲನ ನಡೆಸಿದರು. ಆಂದೋಲನದಲ್ಲಿ ಸಮಿತಿಯ ದಕ್ಷಿಣ ಪ್ರಾಂತ ಸಂಚಾಲಕ ಶಿವರಾಂ, ಕೊಡಗು ಜಿಲ್ಲಾ ಸನಾತನ ಸಂಸ್ಥೆಯ ದೀಪಾ ತಿಲಕ್, ಶ್ರೀಲಕ್ಷ್ಮೀ, ಬಿ.ಎಂ. ರವಿಚಂದ್ರ, ಎನ್.ವಿ. ಬಾಬು, ವಿ.ವಿ. ತಿಲಕ್, ಲಕ್ಷ್ಮಿ ಹರೀಶ್, ಉಮಾ ಶ್ರೀನಾಥ್, ಬಿ.ಪಿ. ಕೃಷ್ಣಮೂರ್ತಿ, ಸುಮನ್ ಪ್ರಸಾದ್, ವಿಜಿ ಕುಮಾರ್, ರಶ್ಮಿ ಸಂಜಯ್ ಹಾಜರಿದ್ದರು.