ಸುಂಟಿಕೊಪ್ಪ, ಸೆ. 29: ಸುಂಟಿಕೊಪ್ಪದ ಸುತ್ತಮುತ್ತಲಿನ ತೋಟಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಬೆಳೆ ಫಸಲುಗಳು ನಾಶಗೊಂಡು ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ.

ಕೊಡಗರ ಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕೊಡಗರ ಹಳ್ಳಿ ಗ್ರಾಮದಲ್ಲಿರುವ ಎ.ಎಂ. ಕಾರ್ಯಪ್ಪ ಅವರ ಗದ್ದೆಗೆ ನುಗ್ಗಿದ ಕಾಡಾನೆಗಳು 2 ಎಕರೆ ಗದ್ದೆ ತುಳಿದು ನಾಶ ಗೊಳಿಸಿ ನಷ್ಟ ಸಂಭವಿಸಿದೆ. ಕಳೆದ ಹಲವು ದಿನಗಳಿಂದ ಈ ಭಾಗದಲ್ಲೇ ಕಾಡಾನೆಗಳ ಗುಂಪು ಬೀಡು ಬಿಟ್ಟಿದ್ದು, ಫಸಲನ್ನು ಧ್ವಂಸಗೊಳಿಸುತ್ತಿವೆ. ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಾಡಾನೆ ಹಾವಳಿಯನ್ನು ಕೂಡಲೇ ನಿಯಂತ್ರಿಸದಿದ್ದಲ್ಲಿ ರೈತರು ಕೃಷಿಯನ್ನು ನಂಬಿ ಬದುಕುವದು ಕಷ್ಟವಾಗಿದೆ ಎಂದು ನೋವು ವ್ಯಕ್ತಪಡಿಸಿದ್ದಾರೆ.