ಮಡಿಕೇರಿ, ಸೆ. 27: ಮಂಜಿನ ನಗರಿ ಮಡಿಕೇರಿಯಲ್ಲಿಂದು ಸೈಕಲ್, ಬೈಕ್, ಓಟಗಾರರ ಕಲರವ., ರಾಜಮಾರ್ಗದುದ್ದಕ್ಕೂ ಬಿಳಿ ಅಂಗಿ ತೊಟ್ಟಿದ್ದ ಸೈಕಲ್ ಸವಾರರು, ಬೈಕ್ ಸವಾರರು ಗುಂಯ್‍ಗುಡುತ್ತಾ ನಿಧಾನಗತಿಯಲ್ಲಿ ಸಾಗಿದರೆ, ಇವರ ನಡುವೆ ಕೆಲವರು ಓಡುತ್ತಾ ಗುಡಿಮುಟ್ಟಿದರು. ಹಲವರು ಸೇರಿ ರಾಜರ ಅರಮನೆ ಸುತ್ತ ಸ್ವಚ್ಛಗೊಳಿಸಿದರು.ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮಗಳಲ್ಲಿ ಕಂಡುಬಂದ ಚಿತ್ರಣವಿದು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮೂಲಕ ವಿವಿಧ ಸಂಘ - ಸಂಸ್ಥೆಗಳ ಸಹ ಯೋಗದೊಂದಿಗೆ ‘ಪ್ರವಾಸೋದ್ಯಮ ಹಾಗೂ ಉದ್ಯೋಗ : ಸರ್ವರಿಗೂ ಉಜ್ವಲ ಭವಿಷ್ಯ’ ಎಂದ ಸಂದೇಶ ದೊಂದಿಗೆ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸಲು ಪ್ರವಾಸಿ ಗರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿತ್ತು. ಈ ಪೈಕಿ ಬೆಳಿಗ್ಗೆ 7 ಗಂಟೆಗೆ ನಗರದ ಫೀ.ಮಾ. ಕಾರ್ಯಪ್ಪ ವೃತ್ತದ ಬಳಿಯಿಂದ ಮ್ಯಾರಥಾನ್, ಸೈಕ್ಲಿಂಗ್ ಹಾಗೂ ದ್ವಿಚಕ್ರ ವಾಹನಗಳ ರ್ಯಾಲಿ ನಡೆಯಿತು.ಶಾಲಾ - ಕಾಲೇಜು ವಿದ್ಯಾರ್ಥಿ ಗಳು, ಸಾರ್ವಜನಿಕರು ಸೇರಿದಂತೆ ನೂರಕ್ಕೂ ಅಧಿಕ ಓಟಗಾರರು ಪಾಲ್ಗೊಂಡಿದ್ದರು. ಕಾರ್ಯಪ್ಪ ವೃತ್ತದಿಂದ ಹೊರಟು, ರಾಜಾಸೀಟ್ ಮಾರ್ಗವಾಗಿ ಹೊಸ ಖಾಸಗಿ ನಿಲ್ದಾಣ, ಕೈಗಾರಿಕಾ ಬಡಾವಣೆಗಾಗಿ ಹಳೆ ಖಾಸಗಿ ಬಸ್ ನಿಲ್ದಾಣಕ್ಕಾಗಿ ಬಂದು ಕೋಟೆ ಆವರಣದಲ್ಲಿ ಸೇರಿದರು. ಅಷ್ಟೊಂದು ದೂರವಿದ್ದರೂ
(ಮೊದಲ ಪುಟದಿಂದ) ದೃತಿಗೆಡದೆ ಓಡಿ ಗುರಿ ತಲಪಿದರು. ಬಾಲಕಿಯರೂ ಕೂಡ ಓಟದಲ್ಲಿ ಪಾಲ್ಗೊಂಡು ಗುರಿಮುಟ್ಟಿ ತಾವೂ ಕೂಡ ಗಟ್ಟಿಗರೆಂದು ತೋರ್ಪಡಿಸಿ ಕೊಟ್ಟರು. ಇಬ್ಬರು ಬಾಲಕಿಯರು ಮಾತ್ರ ಅಸ್ವಸ್ಥಗೊಂಡು ಅವರುಗಳನ್ನು ಆ್ಯಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಶುಶ್ರೂಷೆ ನೀಡಲಾಯಿತು.
ಸೈಕಲ್ - ಬೈಕ್
ಮ್ಯಾರಥಾನ್ ಜೊತೆಯಲ್ಲೇ ಸೈಕಲ್ಲನ್ನೇರಿದ ಬಾಲಕರು, ಬೈಕನ್ನೇರಿದ ಯುವಕರ ತಂಡ ಸಾಗಿತು. ನೂರಕ್ಕೂ ಅಧಿಕ ಮಂದಿ ದ್ವಿಚಕ್ರ ವಾಹನಗಳಲ್ಲಿ ನಿಧಾನಗತಿಯಲ್ಲಿ ಸಾಗಿ ಬಂದರು. ರಸ್ತೆಯುದ್ದಕ್ಕೂ ಬೈಕ್‍ಗಳ
ಸದ್ದು ಮೊಳಗಿದವು. ಪತ್ರಕರ್ತರೂ
ಕೂಡ ರ್ಯಾಲಿಯಲ್ಲಿ ಭಾಗಿಗಳಾಗಿದ್ದರು.
ಶ್ರಮದಾನ
ಕೋಟೆ ಆವರಣದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು, ಸಂಘ - ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಪತ್ರಕರ್ತರು ಸೇರಿಕೊಂಡು
ಕೋಟೆ ಆವರಣದಲ್ಲಿದ್ದ
ಕಸ - ಕಡ್ಡಿಗಳನ್ನು ಹೆಕ್ಕಿ
ಸ್ವಚ್ಛ ಮಾಡಿದರು. ಬೆಳಗ್ಗಿನ ಉಪಾಹಾರದ ವ್ಯವಸ್ಥೆಯನ್ನು ಅಲ್ಲಿಯೇ ಮಾಡಲಾಗಿತ್ತು.
ಡಿಸಿ, ಎಸ್‍ಪಿಯಿಂದ ಚಾಲನೆ
ಮ್ಯಾರಥಾನ್ ಹಾಗೂ ರ್ಯಾಲಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸುಮನ್
ಡಿ. ಪಣ್ಣೇಕರ್ ಚಾಲನೆ
ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ
ಸಲುವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ. ಪ್ರವಾ ಸೋದ್ಯಮವನ್ನು ಪುನಶ್ಚೇತನಗೊಳಿಸುವ
ನಿಟ್ಟಿನಲ್ಲಿ ಎಲ್ಲರ ಜವಾಬ್ದಾರಿಯೂ ಇದೆ ಎಂದು ಹೇಳಿದರು.