ಗೋಣಿಕೊಪ್ಪಲು, ಸೆ. 27: 15 ತಿಂಗಳ ಹಿಂದೆ ಕುಮಾರ ಸ್ವಾಮಿ ಸರಕಾರ ಘೋಷಿಸಿದ್ದ ರೈತರ ಕೃಷಿ ಸಾಲ ಮನ್ನಾ ವಿಚಾರದಲ್ಲಿ ಇನ್ನೂ ಗೊಂದಲ ಮುಂದುವರೆದಿದ್ದು, ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ರೈತರ ಸಾಲ ಮನ್ನಾ ವಿಚಾರದಲ್ಲಿ ಗೊಂದಲ ನಿವಾರಣೆ ಗೊಳಿಸದಿದ್ದಲ್ಲಿ ಸಂಬಂಧಿಸಿದ ಸಹಕಾರ ಸಂಘಗಳ ಹಾಗೂ ಡಿಸಿಸಿ ಬ್ಯಾಂಕ್ ಕಚೇರಿ ಮುಂಭಾಗದಲ್ಲಿ ಬೀಗ ಜಡಿದು ಹೋರಾಟ ನಡೆಸಲಾಗುವದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಗೋಣಿಕೊಪ್ಪ ರೈತ ಸಂಘದ ಕಚೇರಿಯಲ್ಲಿ ರೈತರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರು ಈ ಯೋಜನೆಯಿಂದ ಕೇವಲ ಶೇ. 35 ಮಾತ್ರ ಪ್ರಯೋಜನ ಪಡೆದಿದ್ದು, ಉಳಿದ ಶೇ. 65 ರೈತರಿಗೆ ಸಾಲ ಮನ್ನಾ ವಿಚಾರದಲ್ಲಿ ಯಾವದೇ ಪ್ರಯೋಜನವಾಗಿಲ್ಲ. ಸರ್ಕಾರದ ವತಿಯಿಂದ ಬಿಡುಗಡೆಯಾದ ಸಾಲ ಮನ್ನಾ ವಿಚಾರದಲ್ಲಿ ರೈತರು ನೀಡಿದ ದಾಖಲೆಗಳಲ್ಲಿ ಕುಂದು ಕೊರತೆ ಹೇಳುವ ನೆಪದಲ್ಲಿ ಕೊನೆ ಘಳಿಗೆಯಲ್ಲಿ ಅರ್ಜಿಗಳನ್ನು ತಿರಸ್ಕರಿಸ ಲಾಗಿರುವದು ಸಹಕಾರ ಸಂಘಗಳ ದಾಖಲಾತಿಯಲ್ಲಿ ಕಂಡು ಬಂದಿದೆ. ಇದರಿಂದ ಸಾಲ ಪಡೆದಿರುವ ಅರ್ಹ ಸಾವಿರಾರು ರೈತರು ಸಾಲ ಮನ್ನಾದಿಂದ ವಂಚಿತರಾಗಿದ್ದಾರೆ.

ಇದಕ್ಕೆ ಸರ್ಕಾರ ನೇಮಿಸಿದ ಕಂಪ್ಯೂಟರ್ ಆಪರೇಟರ್‍ಗಳು ವಿಚಾರದಲ್ಲಿ ರೈತರು ನೀಡಿದ ದಾಖಲೆಗಳಲ್ಲಿ ಕುಂದು ಕೊರತೆ ಹೇಳುವ ನೆಪದಲ್ಲಿ ಕೊನೆ ಘಳಿಗೆಯಲ್ಲಿ ಅರ್ಜಿಗಳನ್ನು ತಿರಸ್ಕರಿಸ ಲಾಗಿರುವದು ಸಹಕಾರ ಸಂಘಗಳ ದಾಖಲಾತಿಯಲ್ಲಿ ಕಂಡು ಬಂದಿದೆ. ಇದರಿಂದ ಸಾಲ ಪಡೆದಿರುವ ಅರ್ಹ ಸಾವಿರಾರು ರೈತರು ಸಾಲ ಮನ್ನಾದಿಂದ ವಂಚಿತರಾಗಿದ್ದಾರೆ.

ಇದಕ್ಕೆ ಸರ್ಕಾರ ನೇಮಿಸಿದ ಕಂಪ್ಯೂಟರ್ ಆಪರೇಟರ್‍ಗಳು ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ನೇರ ಕಾರಣ. ಇದರ ಹೊಣೆಯನ್ನು ಜಿಲ್ಲಾ ಸಹಕಾರ ಬ್ಯಾಂಕ್ ಹಾಗೂ ಸರ್ಕಾರ ವಹಿಸಿ ಕೊಂಡು ತಕ್ಷಣ ಸಾಲ ಮನ್ನಾ ಗೊಂದಲ ಬಗೆಹರಿಸಿ ರೈತರ ಖಾತೆ ಗಳಿಗೆ ಹಣ ಜಮಾ ಮಾಡುವಂತೆ ಒತ್ತಾಯಿಸಲಾಗಿದೆ. ಈ ಸಂದರ್ಭ ರೈತ ಸಂಘದ ಜಿಲ್ಲಾ ಸಂಚಾಲಕ ಸುಭಾಷ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಖಜಾಂಚಿ ಇಟ್ಟಿರ ಸಬೀತ ಭೀಮಯ್ಯ, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್ ಹಾಜರಿದ್ದರು.

- ಹೆಚ್.ಕೆ. ಜಗದೀಶ್.