ಸಿದ್ದಾಪುರ, ಸೆ. 27: ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮಡಿಕೇರಿ ತಾಲೂಕು ಮೈಸೂರು ವಿಭಾಗಮಟ್ಟ ಹಾಗೂ ರಾಜ್ಯಮಟ್ಟದ ಹಾಕಿ ಕ್ರೀಡಾಕೂಟವನ್ನು ಮಡಿಕೇರಿ ತಾಲೂಕಿನ ಬೋಯಿಕೇರಿ ಸರಕಾರಿ ಪ್ರಾಥಮಿಕ ಶಾಲೆ ವತಿಯಿಂದ ಆಯೋಜಿಸುತ್ತಿದ್ದು, ಈ ಕುರಿತು ಹಾಕಿ ಕ್ರೀಡಾಕೂಟ ಆಯೋಜನೆ ಕುರಿತ ಪೂರ್ವಭಾವಿ ಸಭೆಯನ್ನು ಅತಿಥೇಯ ಬೋಯಿಕೇರಿ ಶಾಲೆಯಲ್ಲಿ ಕರೆಯಲಾಗಿತ್ತು.

ವೇದಿಕೆಯಲ್ಲಿ ಕೊಡಗು ಜಿಲ್ಲೆ ಉಪ ನಿರ್ದೇಶಕ ಮಚ್ಚಾಡೊ ಕ್ಷೇತ್ರ ಶಿಕ್ಷಣಾಧಿಕಾರಿ, ಗಾಯತ್ರಿ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ವೆಂಕಟೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸ್, ಗ್ರೇಡ್ 1 ತಾಲೂಕು ಅಧ್ಯಕ್ಷ ತಮ್ಮಯ್ಯ, ಬೋಯಿಕೇರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ, ತಾಲೂಕು ದೈ.ಶಿ. ಸಂಘದ ಅಧ್ಯಕ್ಷ, ಕ್ರೀಡಾಕೂಟದ ರುವಾರಿ ಪೂರ್ಣೇಶ್ ಎಸ್.ಡಿ.ಎಂ.ಸಿ. ಅಧ್ಯಕ್ಷ ಆನಂದ್, ಮುಖ್ಯ ಶಿಕ್ಷಕ ರಾಜು, ತಾಲೂಕು ದೈ.ಶಿ.ಶಿ. ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಹಾಗೂ ಹಾಕಿ ಕ್ರೀಡಾಕೂಟದ ತಾಂತ್ರಿಕಾಧಿಕಾರಿಯಾಗಿ ನಿಯುಕ್ತಿಗೊಂಡ ಅಯ್ಯಪ್ಪ, ತೀರ್ಪುಗಾರಾಗಿ ಆಗಮಿಸಿದ ಡ್ಯಾನಿ ಈರಪ್ಪ, ಸುರೇಶ್, ಗಣೇಶ್, ಅಶೋಕ್, ರತೀಶ್, ಪ್ರಸನ್ನ, ಮಂಜು, ತಿಮ್ಮಯ್ಯ, -ರತಿ, ಪ್ರೇಮ, ಪ್ರೇಮಲತಾ, ಶೋಭಾ, ಸಗಾಯಮೇರಿ, ಆದರ್ಶ್, ನಾಗರಾಜ್, ಕಿರಣ್, ಅನಿಲ್, ತೇಜಸ್, ಜಾನ್ಸನ್, ಕವಿತೇಜ್, ಮ್ಯಾಕ್ಲೀನ್, ಗಣೇಶ್, ಪೂವಣ್ಣ, ಪೊನ್ನಪ್ಪ, ಅಪ್ಪಣ್ಣ, ಡ್ಯಾನಿ, ಸಂದೇಶ್ ಉಪಸ್ಥಿತರಿದ್ದು, ಕ್ರೀಡಾಕೂಟದ ರೂಪುರೇಷೆಗಳನ್ನು ಕುರಿತು ಚರ್ಚಿಸಲಾಯಿತು. ಉಪನಿರ್ದೇಶಕರು ಮಾತಾಡಿ ಆತಿಥ್ಯಕ್ಕೆ ಹೆಸರಾದ ಕೊಡಗು ಹೊರ ಜಿಲ್ಲೆಯಿಂದ ಆಗಮಿಸುವ ತಂಡಗಳಿಗೆ ಉತ್ತಮ ಆತಿಥ್ಯದಿಂದ ಸತ್ಕರಿಸಬೇಕು ಎಂದರು.

ಕ್ರೀಡಾಕೂಟಕ್ಕೆ ಅನುದಾನದ ಕೊರತೆ ಇರುವುದರಿಂದ ಆಹ್ವಾನಿಸಲ್ಪಟ್ಪ ತೀರ್ಪುಗಾರರು ಹಲವು ಬಹುಮಾನಗಳ ಪ್ರಾಯೋಜಕತ್ವ ವಹಿಸಿಕೊಂಡರು. ಈ ಸಂದರ್ಭ ಮಾತಾಡಿದ ಪೂರ್ಣೇಶ್, ಮುಂದಿನ ಅವಕಾಶವಿದ್ದರೆ ರಾಷ್ಟಮಟ್ಟದ ಹಾಕಿ ಕ್ರೀಡಾಕೂಟವನ್ನು ಆಯೋಜಿಸಲು ಉತ್ಸುಕನಾಗಿದ್ದೇನೆ ಎಂದರು. ಇದನ್ನು ಎಲ್ಲಾ ವೃತ್ತಿಬಾಂಧವರು ತುಂಬು ಮನಸ್ಸಿನಿಂದ ಸ್ವಾಗತಿಸಿದರು. ಕ್ರೀಡಾಕೂಟದ ಪೂರ್ಣ ಜವಬ್ದಾರಿಯನ್ನು ರಚನೆ ಮಾಡಿದ ಆಯಾ ಸಮಿತಿಗಳಿಗೆ ವಹಿಸಲಾಯಿತು. ದೈ.ಶಿ. ಸಂಘದ ಕಾರ್ಯದರ್ಶಿ ಶಿವಪ್ರಸಾದ್ ವಂದಿಸಿದರು.