ಮಡಿಕೇರಿ, ಸೆ. 28: ಮಡಿಕೇರಿ ನಗರಸಭೆಯ ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ದರ ಹೆಚ್ಚಳವನ್ನು ಸರಿಪಡಿಸಲು ಇಲಾಖೆಯ ಕೇಂದ್ರ ಕಚೇರಿ ಕ್ರಮಕೈಗೊಂಡಿದೆ.

ನೂತನ ಸಾಫ್ಟ್‍ವೇರ್‍ನಲ್ಲಿ 2005ರ ದರ ನಮೂನೆ ಬದಲು 2018ರ ದರವನ್ನು ಕಂಪ್ಯೂಟರ್‍ಗೆ ಅಳವಡಿಸಿರುವದರಿಂದ ತೆರಿಗೆದಾರರಿಗೆ ನಾಲ್ಕು ಪಟ್ಟು ತೆರಿಗೆ ಹೆಚ್ಚಳವಾಗಿತ್ತು. ಈ ಬಗ್ಗೆ ನಗರಸಭೆ ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ‘ಶಕ್ತಿ’ ಮನವರಿಕೆ ಮಾಡಿತ್ತು. ಜಿಲ್ಲಾಧಿಕಾರಿಗಳು ಇತ್ತೀಚೆಗೆ ನಗರಾಭಿವೃದ್ಧಿ ಕೋಶದ ಅಧಿಕಾರಿ ಹೇಮಕುಮಾರ್ ಅವರನ್ನು ಕರೆಯಿಸಿ ಪರಿಶೀಲಿಸುವಂತೆ ಸೂಚಿಸಿದ್ದರು.ಅಧಿಕಾರಿ ಬೆಂಗಳೂರು ಕಚೇರಿ ಯನ್ನು ಸಂಪರ್ಕಿಸಿ ಉಂಟಾದ ಗೊಂದಲದ ಬಗ್ಗೆ ವಿವರಿಸಿದ್ದರು. ಇದೀಗ ಬೆಂಗಳೂರು ಕಚೇರಿ ಹಿರಿಯ ಅಧಿಕಾರಿಗಳು ಸ್ಪಂದಿಸಿದ್ದು, ಮಡಿಕೇರಿ ನಗರಸಭೆಯಲ್ಲಿಯೇ ಕಂಪ್ಯೂಟರ್‍ನಲ್ಲಿ ದರ ಬದಲಾಯಿ ಸಲು ಅವಕಾಶ ಕಲ್ಪಿಸಿದ್ದಾರೆ.ಇದೀಗ ನಗರಸಭೆ ತುರ್ತು ಸ್ಪಂದಿಸಿ ಕಾರ್ಯೋನ್ಮುಖವಾಗ ಬೇಕಿದ್ದು, ಸಮಸ್ಯೆಗೆ ತೆರೆ ಎಳೆಯಬೇಕಿದೆ.