ಮೂವರು ಉಗ್ರರು ಬಲಿ ಜಮ್ಮು-ಕಾಶ್ಮೀರ, ಸೆ. 28: ಗಂದೇರ್ ಬಾಲ್ ಜಿಲ್ಲೆಯ ನರನಾಗ್ ಬಳಿ ಮೂವರು ಭಯೋತ್ಪಾದಕರನ್ನು ಭಾರತೀಯ ಸೇನೆಯ ಯೋಧರು ಹೊಡೆದುರು ಳಿಸಿದ್ದಾರೆ. ಇದೇ ವೇಳೆ ಭಾರತೀಯ ಯೋಧರೊಬ್ಬರು ಹುತಾತ್ಮ ರಾಗಿದ್ದಾರೆ. ಬೆಳಿಗ್ಗೆ ಭಾರತೀಯ ಸೇನಾ ವಾಹನದ ಮೇಲೆ ಉಗ್ರರು ಗ್ರೈನೇಡ್ ದಾಳಿ ನಡೆಸಿದ್ದರು. ಕೂಡಲೇ ಭಾರತೀಯ ಸೇನೆಯ ಯೋಧರು ಉಗ್ರರ ವಿರುದ್ಧ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಪರಾರಿಯಾಗಿದ್ದ ಮೂವರು ಉಗ್ರರು ಮನೆಯೊಂದರಲ್ಲಿ ಅಡಗಿ ಕುಳಿತ್ತಿದ್ದರು. ಕೂಡಲೇ ಮನೆಯನ್ನು ಸುತ್ತುವರಿದ ಭಾರತೀಯ ಯೋಧರು ಮೂವರು ಉಗ್ರರನ್ನು ಹತ್ಯೆ ಮಾಡಿದ್ದು ಒತ್ತೆಯಾ ಳಾಗಿದ್ದ ವೃದ್ಧದನ್ನು ರಕ್ಷಿಸಿದ್ದಾರೆ.