ಮಡಿಕೇರಿ, ಸೆ.27: ಈಗಿನ ಆಧುನಿಕ ಯುಗದಲ್ಲಿ ಸರಕಾರೀ ಆಸ್ಪತ್ರೆÉಗಳು ಖಾಸಗಿ ಆಸ್ಪತ್ರೆಗಳ ಬೆಳವಣಿಗೆ ನಡುವೆ ಸ್ಪರ್ಧಾತ್ಮಕವಾಗಿ ಮುನ್ನಡೆÀಯಲು ಗಮನ ಹರಿಸಲಾಗುತ್ತಿದೆ ಆ ಮೂಲಕ ಬಡ ವರ್ಗದ ಜನರಿಗೆ ಸುಲಭ ಚಿಕಿತ್ಸೆ ಮೂಲಕ ಆರೋಗ್ಯ ಭಾಗ್ಯ ಒದಗಿಸಲು ಆಸ್ಥೆ ವಹಿಸಲಾಗುತ್ತದೆ ಎಂದು ರಾಜ್ಯ ಆರೋಗ್ಯ ಖಾತೆ ಸಚಿವ ಶ್ರೀ ರಾಮುಲು ಭರವಸೆಯಿತ್ತರು.ನಗರದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ವೈದ್ಯಾಧಿಕಾರಿಗಳ ಜೊತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರ ಜೊತೆ ಸಚಿವರು ಮಾತನಾಡಿದರು.ಗುಡ್ಡಗಾಡು ಪ್ರದೇಶಗಳ ಸರಕಾರೀ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ವೈದ್ಯರುಗಳಿಗೆ ಇತರೆಡೆÀಗಳ ವೈದ್ಯರುಗಳಿಗಿಂತ ಅಧಿಕ ವೇತನ ಕಲ್ಪಿಸುವ ಹಿನ್ನೆಲೆಯಲ್ಲಿ ಪ್ರಯತ್ನ ನಡೆದಿದೆ. ಈ ಬಗ್ಗೆ ರಾಜ್ಯ ಅರ್ಥ ಸಚಿವಾಲಯಕ್ಕೆ ಆರೋಗ್ಯ ಇಲಾಖೆ ಯಿಂದ ಪ್ರಸ್ತಾವನೆ ಕಳುಹಿಸಲಾಗುವದು ಎಂದು ಸಚಿವ ಶ್ರೀರಾಮುಲು ಭರವಸೆಯತ್ತರು. ಇಂದು ಇಲ್ಲಿ “ಶಕ್ತಿ” ಯೊಂದಿಗೆ ಮಾತನಾಡುತ್ತಿದ್ದ ಅವರು ಪ್ರಶ್ನೆ ಯೊಂದಕ್ಕೆ ಪ್ರತಿಕ್ರಿಯಿಸಿ ವೈದ್ಯರುಗಳು ಆಸ್ಪÀತ್ರೆಯ ವೇಳೆಯಲ್ಲಿ ನಿಯತ್ತಾಗಿ ಬಡ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಸಿ ಕೊಳ್ಳ್ಳಬೇಕಾಗಿದೆ. ಕರ್ತವ್ಯದ ವೇಳೆ ಹೊರತು ಪಡಿಸಿ ಖಾಸಗಿ ಕ್ಲಿನಿಕ್‍ಗಳಲ್ಲಿ ತಮ್ಮ ರೋಗಿಗಳ ಪರೀಕ್ಷೆ ನಡೆಸಬಹುದೇ ಹೊರತು ಕರ್ತವ್ಯದ ವೇಳೆ ಈ ಕಾರ್ಯ ಮಾಡುವಂತಿಲ್ಲ. ಅಂತಹವರ ವಿರುದ್ಧ ಶಿಸ್ತು ಕ್ರಮ ಕೈ ಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಗುತ್ತಿಗೆದಾರ ಕಾರ್ಮಿಕರು ಬಡರೋಗಿಗಳಿಗೆ ಆಸ್ಪತ್ರೆಯಲ್ಲಿ ತಂಗುವ ಹಾಗೂ ಆಹಾರ ಸರಬರಾಜಿನ ಸಮರ್ಪಕ ಸೇವೆ ಮಾಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಆಸ್ಪತ್ರೆಗಳ ಸ್ಪರ್ಧೆಯ ನಡುವೆ ಸರಕಾರೀ ಆಸ್ಪತ್ರೆಗಳಲ್ಲಿ ಸ್ಪರ್ಧಾತ್ಮಕ ವಾಗಿಯೇ ಸಿಬ್ಬಂದಿ ಮತ್ತು ವೈದ್ಯರು ಗಳು ಸೇವೆ ಸಲ್ಲಿಸುವದು ಇಂದಿನ ಆಗತ್ಯವಾಗಿದೆ. ಸಿಬ್ಬಂದಿ ಹಾಗೂ ವೈದ್ಯರ ಕೊರತೆಯನ್ನು ತುಂಬಲು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕೇಂದ್ರÀ ಸರಕಾರದ ನೆರವನ್ನೂ ಪಡೆದು ಹುದ್ದೆ ಭರ್ತಿ ಮಾಡಲು ಗಮನ ಹರಿಸಲಾಗುವದು ಎಂದು ಸಚಿವರು ಭರವಸೆಯಿತ್ತರು.

(ಮೊದಲ ಪುಟದಿಂದ)

5 ನಿರ್ದೇಶಕರುಗಳ ನೇಮಕ

ಆಸ್ಪತ್ರೆಗಳÀಲ್ಲಿನ ಹಲವು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತಾನು ತೆರಳಿದ ಸ್ಥಳಗಳಲ್ಲಿ ಆಸ್ಪತ್ರೆಯಲ್ಲಿ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಆ ಮೂಲಕ ಆಸ್ಪತ್ರೆ ವಾತಾವರಣದಲ್ಲಿ ಚುರುಕು ಮೂಡುತ್ತದೆ.ಬಡ ರೋಗಿಗಳಿಗೂ ನಂಬುಗೆ ಮೂಡುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ಚುರುಕುತನ ಮುಂದುವರಿಯಲು ರಾಜ್ಯದಲ್ಲಿನ ಆಸ್ಪತ್ರೆಗಳಲ್ಲಿ ್ಲ 5 ಪ್ರಾದೇಶಿಕ ವಿಭಾಗಗಳನ್ನು ರಚಿಸಿ ಪ್ರತ್ಯೇಕ 5 ಮಂದಿ ನಿರ್ದೇಶಕರುಗಳನ್ನು ನೇಮಿಸಲಾಗುವದು. ಆ ಮೂಲಕ ರಾಜ್ಯದ ಆಸ್ಪತ್ರೆÉ್ರಗಳ ಸ್ಥಿತಿ ಗತಿಯ ನಿರಂತರ ಅವಲೋೀಕನದೊಂದಿಗೆ ಉತ್ತಮ ಸೇವೆಯತ್ತ ಹದ್ದುಗಣ್ಣಿರಿಸಲಾಗುವದು ಎಂದು ಮಾಹಿತಿಯಿತ್ತರು.

ಕೊಡಗು ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರು ಹಾಗೂ ಶ್ರುಶ್ರೂಷಕ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವದು. ಹಾಗೆಯೇ ಆಸ್ಪತ್ರೆಗೆ ಬೇಕಿರುವ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವದು ಎಂದು ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ನುಡಿದರು.

ಕೊಡಗು ಜಿಲ್ಲಾ ಆಸ್ಪತ್ರೆಯು ಈಗ ಕೊಡಗು ವೈದ್ಯಕೀಯ ವಿಜ್ಞಾನ ವಿಭಾಗಕ್ಕೆ ಸೇರಿದೆ. 450 ಹಾಸಿಗೆ ಆಸ್ಪತ್ರೆಯಾಗಿದ್ದು, ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಅಗತ್ಯ ಔಷಧೋಪಚಾರ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಬೇಕಿರುವ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಕಲ್ಪಿಸಲಾಗುವದು ಎಂದು ಸಚಿವರು ತಿಳಿಸಿದರು.

‘ಮಲ್ಟಿ ಸ್ಪೆಷಾಲಿಟಿ’ ಆಸ್ಪತ್ರೆ

ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿನ ಜನರು ಆರೋಗ್ಯಕ್ಕೆ ಸಂಬಂಧಿಸಿದಂತೆ ಮೈಸೂರು ಅಥವಾ ಮಂಗಳೂರಿಗೆ ತೆರಳುವದು ಕಷ್ಟವಾಗಲಿದೆ. ಅಲ್ಲದೆ, ಕೊಡಗು ಭೌಗೋಳಿಕವಾಗಿ ಗುಡ್ಡಗಾಡು ಜಿಲ್ಲೆಯಾದ್ದರಿಂದ À ಜಿಲ್ಲೆಯಲ್ಲಿ ‘ಮಲ್ಟಿ ಸ್ಪೆಷಾಲಿಟಿ’ ಆಸ್ಪತ್ರೆಗೆ ಬೇಡಿಕೆಯಿದ್ದು, ಈ ಸಂಬಂಧ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುವದು ಎಂದು ಅವರು ತಿಳಿಸಿದರು. ಈ ಮೊದಲು ಅನೇಕರು ಸಚಿವರಿಗೆ ಟ್ವೀಟ್ ಮಾಡಿ ‘ಮಲ್ಟಿ ಸ್ಪೆಷಾಲಿಟಿ’ ಆಸ್ಪತ್ರೆÉ ಸ್ಥಾಪಿಸುವಂತೆ ಕೋರಿದ್ದರು. ಸಚಿವರು ಕೊಡವ ಭಾಷೆಯಲ್ಲಿ ಟ್ವೀಟ್ ಮಾಡಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದುದು ವಿಶೇಷವಾಗಿತ್ತು

ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಕಾರ್ಯಕ್ರಮಗಳು ದೇಶದಲ್ಲಿ ಮಾದರಿಯಾಗಿದೆ. ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಅವರು ಹಲವು ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಸರ್ಕಾರಿ ವೈದ್ಯಾಧಿಕಾರಿಗಳು ಸರ್ಕಾರಿ ಕೆಲಸ ದೇವರ ಕೆಲಸವೆಂದು ಕಾರ್ಯನಿರ್ವಹಿಸಬೇಕು ಎಂದರು. ಈ ಸಂದರ್ಭ ಜಿ.ಪಂ.ಸದಸ್ಯರಾದ ಮಂಜುಳಾ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಕಾರ್ಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ವೈದ್ಯಾಧಿಕಾರಿ ಎ.ಜೆ.ಲೋಕೇಶ್ ಮೊದಲಾದವರಿದ್ದರು.

ಗುರುವಾರ ತಡ ರಾತ್ರಿ ಮಡಿಕೇರಿಗೆ ಆಗಮಿಸಿದ ಸಚಿವ ಶ್ರೀರಾಮುಲು ಅವರು ಖಾದಿ ಬಟ್ಟೆ ಧರಿಸಿ ಆಸ್ಪತ್ರೆಯ ಕೊಠಡಿ ಸಂಖ್ಯೆ 218 ರಲ್ಲಿ ರಾತ್ರಿ ವೇಳೆಯೇ ಪೂಜೆ ಮಾಡಿ ಬಳಿಕ ಅದೇ ಕೊಠಡಿಯಲ್ಲಿ ತಂಗಿದರು.

ಮಾದಾಪುರ ವೈದ್ಯರ ಅಮಾನತು

ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಅನಿಲ್ ಎಂಬವರನ್ನು ಅಮಾನತುಗೊಳಿಸಿ ಆರೋಗ್ಯ ಸಚಿವರು ಆದೇಶ ಹೊರಡಿಸಿದರು. ಡಾ. ಅನಿಲ್ ವಿರುದ್ಧ ಬಹಳಷ್ಟು ದೂÀರುಗಳಿದ್ದು, ಕರ್ತವ್ಯಲೋಪ, ಬೆದರಿಕೆ ಆರೋಪ ಬಂದ ಹಿನ್ನೆಲೆ ಈ ಕ್ರಮ ಕೈಗೊಂಡಿದಾಗಿ ತಿಳಿಸಿದರು.