ಗೋಣಿಕೊಪ್ಪ ವರದಿ, ಸೆ. 28 : ಇಲ್ಲಿನ ಇಗ್ಗುತ್ತಪ್ಪ ಕೊಡವ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಕೈಲ್‍ಪೊಳ್ದ್ ಕಳಿಕೂಟ ತಾ. 29 ರಂದು (ಇಂದು) ಹರಿಶ್ಚಂದ್ರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಬೆಳಿಗ್ಗೆ 9 ಗಂಟೆಗೆ ದೇವಳ ತುದಿಪೊ, ಆಯುಧ ಪೂಜೆ ನಡೆಯಲಿದೆ. 9.30 ರಿಂದ ಕಳಿಕೂಟ ಉದ್ಘಾಟನೆ ನಡೆಯಲಿದೆ. ಸಂಘದ ಸದಸ್ಯರು ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ. 11.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಭಾಗವಹಿಸಲಿದ್ದಾರೆ.

ಈ ಸಂದರ್ಭ ಇಗ್ಗುತ್ತಪ್ಪ ಕೊಡವ ಸಂಘ ಅಧ್ಯಕ್ಷ ತಿರುನೆಲ್ಲಿಮಾಡ ದೇವಯ್ಯ ಉಪಸ್ಥಿತಲಿರುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.