ಶನಿವಾರಸಂತೆ, ಸೆ. 28: ಸಮೀಪದ ಕೊಡ್ಲಿಪೇಟೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ತಾ. 29 ರಿಂದ ಅ. 8ರ ವರೆಗೆ ಶರನ್ನವರಾತ್ರಿ ಪೂಜಾ ಕೈಂಕರ್ಯಗಳು ಹಾಗೂ ವಿಶೇಷ ಸೇವೆಗಳು ನಡೆಯಲಿವೆ.
ತಾ. 29 ರಂದು ಬೆಳಿಗ್ಗೆ 9 ಗಂಟೆಯಿಂದ ಅಖಂಡ ದೀಪಸ್ಥಾಪನೆ ಘಟಸ್ಥಾಪನಂ, ಸಂಜೆ 6 ಗಂಟೆಗೆ ದುರ್ಗಾಪೂಜೆ, ಮಂಗಳ ದ್ರವ್ಯಾಭಿಷೇಕ, ಕಲಶಾಭಿಷೇಕ, ದೇವಿಗೆ ಮಹಾಕಾಳಿ ಅಲಂಕಾರ ನಡೆಯಲಿದೆ. ತಾ. 30 ರಂದು ಸಂಜೆ 6 ಗಂಟೆಗೆ ಶ್ರೀಲಕ್ಷ್ಮೀ ಅಲಂಕಾರದಲ್ಲಿ ಸುವಾಸಿನಿಯರಿಂದ ಸಾಮೂಹಿಕ ಕುಂಕುಮಾರ್ಚನೆಯಾಗಲಿದೆ. ಅ. 1 ರಂದು ಸಂಜೆ 6 ಗಂಟೆಗೆ ಮಹೇಶ್ವರಿ ಅಲಂಕಾರದಲ್ಲಿ ದುರ್ಗಾ ದೀಪ ನಮಸ್ಕಾರ, ಅ. 2 ರಂದು ಸ್ಕಂದಮಾತಾ ಅಲಂಕಾರದಲ್ಲಿ ರಂಗಪೂಜೆ.
ಅ. 3 ರಂದು ಶ್ರೀಲಲಿತಾ ಅಲಂಕಾರದಲ್ಲಿ ದುರ್ಗಾರತಿ, ಅ. 4 ರಂದು ರಾಜರಾಜೇಶ್ವರಿಗೆ ಪ್ರಾಕಾರೋತ್ಸವ, ಅ. 5 ರಂದು ಶಾರದಾಂಬೆಗೆ ಸರಸ್ವತ್ಯಾಹ್ವಾನಂ, 6 ರಂದು ಶ್ರೀದುಗಾ ಮಾತೆಗೆ ದೀಪಾರಾಧನೆ, 7 ರಂದು ದುರ್ಗಾ ಹೋಮ, ವಿರಾಟ ದರ್ಶನಂ ಹಾಗೂ ಅ. 8 ರಂದು ಬೆಳಿಗ್ಗೆ 9 ಗಂಟೆಗೆ ದುರ್ಗಾ ಕಲಶ ವಿಸರ್ಜನೆ ಕಾರ್ಯಕ್ರಮ ಹಾಗೂ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ.