ಸಿದ್ದಾಪುರ, ಸೆ.28: ನಿರಾಶ್ರಿತರ ನಿವೇಶನ ಹೋರಾಟ ಸಮಿತಿಯ ನೇತೃತ್ವದಲ್ಲಿ ಗುಹ್ಯ ಹಾಗೂ ಕರಡಿಗೋಡುವಿನ ನಿರಾಶ್ರಿತರಿಂದ ಶಾಶ್ವತ ಸೂರು ಒದಗಿಸಲು ಒತ್ತಾಯಿಸಿ ಸಿದ್ದಾಪುರ ಪಟ್ಟಣದಲ್ಲಿ ತಾ. 30 ರಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ. ಹಳೇ ಸಿದ್ದಾಪುರದಿಂದ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದ್ದು, ಬಳಿಕ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಈಗಾಗಲೇ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ ಎಂದು ಸಮಿತಿ ತಿಳಿಸಿದೆ.