ಮಡಿಕೇರಿ, ಸೆ. 27: ವಿಶ್ವಪ್ರವಾಸೋದ್ಯಮ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರವಾಸೋದ್ಯಮ ಹಾಗೂ ಪ್ರಕೃತಿ - ಪರಿಸರಕ್ಕೆ ಸಂಬಂಧಿಸಿದ ಛಾಯಾಚಿತ್ರ ಪ್ರದರ್ಶನ ಜನಮನ ಸೂರೆಗೊಂಡಿತು.

ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಪ್ರದರ್ಶನವನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಉದ್ಘಾಟಿಸಿದರು. ನಂತರ ಅತಿಥಿಗಳೊಂದಿಗೆ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಗಳು ಪ್ರದರ್ಶನಕ್ಕಿಟ್ಟ ಛಾಯಾಚಿತ್ರಗಳನ್ನು ಸ್ವತಃ ಚಿತ್ರ ತೆಗೆಯುವ ಮೂಲಕ ಆಸ್ವಾದಿಸಿದರು.

ಈ ಸಂದರ್ಭ ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಶನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಹೋಂಸ್ಟೇ ಅಸೋಸಿಯೇಶನ್ ಅಧ್ಯಕ್ಷ ಬಿ.ಜಿ. ಅನಂತಶಯನ, ಟ್ರಾವೆಲ್ ಕೂರ್ಗ್ ಸಂಸ್ಥೆ ಅಧ್ಯಕ್ಷ ಸತ್ಯ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್. ಪ್ರಕಾಶ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ, ಫೀ.ಮಾ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಜಗತ್ ತಿಮ್ಮಯ್ಯ ಇತರರಿದ್ದರು.

ಪತ್ರಕರ್ತರಾದ ಅನಿಲ್ ಹೆಚ್.ಟಿ., ಬಿ.ಜಿ. ಅನಂತಶಯನ, ಚಿ.ನಾ. ಸೋಮೇಶ್, ಕುಡೆಕಲ್ ಸಂತೋಷ್, ಪ್ರಜ್ಞಾ ಜಿ.ಆರ್. ಲಕ್ಷ್ಮೀಶ್, ಹವ್ಯಾಸಿ ಛಾಯಾಗ್ರಾಹಕರಾದ ಕವಿತಾ ವಿ.ರಾಮ್, ಪೂಜಾರಿರ ಕೃಪಾ ದೇವರಾಜ್, ಆಶಾ ಸದಾನಂದ್, ಮುಕ್ಕಾಟಿರ ಡೀನಾ ಪೂವಣ್ಣ, ಸಿರಿಗಂಥ ಶ್ರೀನಿವಾಸ್ ಮೂರ್ತಿ, ಹರೀಶ್ ಕಿಗ್ಗಾಲು, ಅರಣ್ಯಾಧಿಕಾರಿ ಬಿ.ಬಿ. ಮಲ್ಲೇಶ್ ಅವರುಗಳು ಪ್ರದರ್ಶನಕ್ಕಿಟ್ಟಿದ್ದ ನೂರಾರು ಚಿತ್ರಗಳು ಕಣ್ಮನ ಸೂರೆಗೊಂಡವು.