ವೀರಾಜಪೇಟೆ, ಸೆ. 27: ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನ ಪೋಷಕ ಹಾಗೂ ಬೋಧಕರ ಸಭೆಯನ್ನು ತಾ. 30, ಅಕ್ಟೋಬರ್ 1 ಹಾಗೂ 3 ರಂದು ನಡೆಸಲಾಗುತ್ತಿದ್ದು, ತಾ. 30ರ ಮಧ್ಯಾಹ್ನ 2.30 ಕ್ಕೆ ಬಿ.ಎಸ್ಸಿ, ಬಿ.ಸಿ.ಎ, ಅಕ್ಟೋಬರ್ 1 ರಂದು ಮಧ್ಯಾಹ್ನ 2.30ಕ್ಕೆ ಬಿ.ಕಾಂ, ಅಕ್ಟೋಬರ್ 3 ರಂದು ಮಧ್ಯಾಹ್ನ 2.30ಕ್ಕೆ ಬಿ.ಎ, ಬಿಬಿಎ, ತರಗತಿಗಳ ಪೋಷಕ-ಬೋಧಕರ ಸಭೆಯನ್ನು ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಏರ್ಪಡಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳ ಪೋಷಕರು ನಿಗದಿಪಡಿಸಿದ ದಿನದಂದು ತಪ್ಪದೆ ಹಾಜರಾಗಿ ತಮ್ಮ ಮಕ್ಕಳ ಪ್ರಗತಿ ಪರಿಶೀಲನೆ ಹಾಗೂ ಹಾಜರಾತಿಯನ್ನು ಪರಿಶೀಲಿಸುವಂತೆ ಪ್ರಾಂಶುಪಾಲರು ತಿಳಿಸಿರುತ್ತಾರೆ.