ಮಡಿಕೇರಿ, ಸೆ. 26: ಶಾಲಾ ದಿನದಿಂದಲೇ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವದು ಇಂಟರ್ಯಾಕ್ಟ್ ಕ್ಲಬ್‍ನ ಉದ್ದೇಶವಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್‍ನ ಅಧ್ಯಕ್ಷ ಎಂ.ಆರ್. ಜಗದೀಶ್ ಹೇಳಿದರು.
ಮರಗೋಡಿನ ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದ ಇಂಟರ್ಯಾಕ್ಟ್ ಕ್ಲಬ್ ಅನ್ನು ಉದ್ಘಾಟಿಸಿ ಮಾತನಾಡಿದರು. ಪದಗ್ರಹಣ ಅಧಿಕಾರಿಯಾಗಿ ಪಾಲ್ಗೊಂಡಿದ್ದ ರೊಟೇರಿಯನ್ ಅಂಬೆಕಲ್ ವಿನೋದ್ ಮಾತನಾಡಿ, ಇಂಟರ್ಯಾಕ್ಟ್ ಕ್ಲಬ್ ಒಂದು ಸೇವಾ ಸಂಸ್ಥೆಯಾಗಿ ಉತ್ತಮ ಪರಿಸರವನ್ನು ರೂಪಿಸಲು ಮುಂದಾಗಿದೆ ಎಂದರು.
ರೋಟರಿ ಇಂಟರ್ಯಾಕ್ಟ್ ಚೇರ್‍ಮನ್ ರೊಟೇರಿಯನ್ ಮಧುಸೂದನ್ ಮಾತನಾಡಿ, ಯಾವದೇ ಕೆಲಸ ಮಾಡುವ ಮೊದಲು ಪರೀಕ್ಷೆಗಳಿಗೆ ಪ್ರತಿಯೊಬ್ಬರೂ ತಮ್ಮನ್ನು ಒಡ್ಡಿಕೊಳ್ಳಬೇಕು ಎಂದರು. ರೋಟರಿ ಇಂಟರ್ಯಾಕ್ಟ್ ಕ್ಲಬ್‍ನ ನೂತನ ಅಧ್ಯಕ್ಷ ಬಿ.ಟಿ. ಲಿಪಿನ್ ಹಾಗೂ ಕಾರ್ಯದರ್ಶಿಯಾಗಿ ಎಂ.ಜೆ. ಪ್ರೀತಾ ಆಯ್ಕೆಯಾದರು. ನೂತನ ಘಟಕಕ್ಕೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ 5000 ರೂಪಾಯಿಗಳನ್ನು ಹಾಗೂ ಶಾಲಾ ಗ್ರಂಥಾಲಯಕ್ಕೆ 100 ಪುಸ್ತಕಗಳನ್ನು ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿಹಿಲ್ಸ್ ನಿಯೋಜಿತ ಅಧ್ಯಕ್ಷ ಪಿ. ಸಂದೀಪ್, ಭಾರತಿ ಹೈಸ್ಕೂಲ್ ಸೊಸೈಟಿ ಅಧ್ಯಕ್ಷ ಕಟ್ಟೆಮನೆ ಸೋನಜಿತ್, ಮುಖ್ಯ ಶಿಕ್ಷಕ ಪಿ.ಎಸ್. ರವಿಕೃಷ್ಣ, ಸಂಘಟನಾ ಶಿಕ್ಷಕಿ ಬಿ.ಬಿ. ಪೂರ್ಣಿಮ, ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಭಾರತಿ ಹೈಸ್ಕೂಲ್ ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರುಗಳು, ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು. ಹೆಚ್.ಎನ್. ಶೃತಿ ನಿರೂಪಿಸಿ, ಪಿ.ಪಿ. ಡಯಾನ ಸ್ವಾಗತಿಸಿ ಬಿ.ಎಸ್. ಪಯಸ್ವಿನಿ ವಂದಿಸಿದರು.