*ಗೋಣಿಕೊಪ್ಪಲು, ಸೆ. 26: ಬಾಳೆಲೆ ವ್ಯಾಪ್ತಿಯ ಕಾರ್ಮಾಡು ಆರೋಗ್ಯ ಉಪಕೇಂದ್ರದಲ್ಲಿ ಪ್ರಧಾನಮಂತ್ರಿ ಪೆÇೀಷಣ ಅಭಿಯಾನ ಕಾರ್ಯಕ್ರಮ ನಡೆಯಿತು. ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರತಾಪ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿವೇಕನಂದಾ ಯೂತ್ ಮೂವ್‍ಮೆಂಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗರ್ಭಿಣಿಯರಿಗೆ ಸೀಮಂತ ಸಾಂಪ್ರದಾಯಿಕ ಆಚರಣೆಯನ್ನು ನೆರವೇರಿಸಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. 16ಕ್ಕೂ ಹೆಚ್ಚು ಗರ್ಭಿಣಿಯರು ಪಾಲ್ಗೊಂಡಿದ್ದರು.

ಕಾರ್ಮಾಡು ಗ್ರಾ.ಪಂ. ಅಧ್ಯಕ್ಷೆ ಅನಿತಾ, ಜಿಲ್ಲಾ ಕ್ಷಯರೋಗ ಸಂಯೋಜಕ ಶ್ರೀಧರ್, ವಿವೇಕನಂದಾ ಯುತ್ ಮೂವ್‍ಮೆಂಟ್‍ನ ವ್ಯವಸ್ಥಾಪಕ ವಾಗೀಶ್, ಸಂಯೋಜಕ ಸತೀಶ್, ಮೇಲ್ವಿಚಾರಕರಾದ ಶಾಲಿನಿ, ಲೋಕೇಶ್, ಸೆಲಿನ್, ಕಿರಿಯ ಆರೋಗ್ಯ ಸಹಾಯಕಿ ಎನ್.ಕೆ. ರೂಪ ಮತ್ತು ಸುಮನ್ ಹಾಜರಿದ್ದರು.