ಶ್ರೀಮಂಗಲ, ಸೆ. 26: ಪ್ರಪಂಚದ ಎಲ್ಲಾ ಕೊಡವರು ಸೇರುವಂತೆ ಕೊಡವ ಸಾಂಸ್ಕøತಿಕ ಮೇಳ ನಡೆಸಲು ಇಟ್ಟಿದ್ದ ಪ್ರಸ್ತಾವನೆಗೆ ಮಹಾಸಭೆಯಲ್ಲಿ ಒಪ್ಪಿಗೆ ದೊರೆತಿದು,್ದ ಈ ನಿಟ್ಟಿನಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ 2020ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಕಾರ್ಯಕ್ರಮ ನಡೆಸಲು ಕಾರ್ಯೊನ್ಮುಖರಾಗಿರುವುದಾಗಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ ಅವರು ಹೇಳಿದರು.
ಕೊಡವ ಸಮಾಜದ ಕಚೇರಿಯಲ್ಲಿ ಆಡಳಿತ ಮಂಡಳಿಯ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದರು. ಪ್ರಪಂಚದ ಎಲ್ಲಾ ಕಡೆ ನೆಲೆಸಿರುವ ಕೊಡವರು ಮೇಳದಲ್ಲಿ ಭಾಗವಹಿಸಬೇಕೆನ್ನುವ ಮಹತ್ವಕಾಂಕ್ಷೆಯಿಂದ ಕೊಡವ ಮೇಳಕ್ಕೆ ಯಾವದೇ ವ್ಯಾಪ್ತಿ ನಿಗದಿ ಪಡಿಸಿಲ್ಲ. ಈ ಮೇಳದಲ್ಲಿ ಕೊಡವರ ಸಮಗ್ರ ವಿಚಾರದ ಬಗ್ಗೆ ಗಂಭೀರವಾಗಿ ಚರ್ಚಿಸಿ ಮುಂದಿನ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲು ಈ ಮೇಳ ಆಯೋಜಿಸಲಾಗಿದೆ. ವಿಶ್ವದ ಎಲ್ಲಾ ಕಡೆ ನೆಲೆಸಿರುವ ಕೊಡವರು ಈ ಮೇಳದಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿ ಪರಿಚಯಿಸಿಕೊಳ್ಳುವ ಮತ್ತು ಕೊಡವರ ಸ್ಥಿತಿ ಗತಿಗಳ ಬಗ್ಗೆ ಮುಂದಿನ ಹೆಜ್ಜೆ ಇಡಲು ಈ ಮೇಳದಲ್ಲಿ ಚಿಂತನೆಗೆ ಸಹಕಾರಿ ಆಗಲಿದೆ. ಈ ಕಾರ್ಯಕ್ರಮ ಎಷ್ಟು ದಿನ ನಡೆಸಬೇಕೆನ್ನುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವದು ಎಂದು ಹೇಳಿದರು.
ಕೊಡವ ಮದುವೆ ಪದ್ಧತಿ, ಮಗುವಿಗೆ ನಾಮಕರಣ, ಹಬ್ಬ ಆಚರಣೆ, ಸಾವು ಇತ್ಯಾದಿ ಸಂದರ್ಭದಲ್ಲಿ ಆಚರಣೆ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲು ಕೊಡವ ಪದ್ದತಿ -ಪರಂಪರೆ, ಆಚಾರ - ವಿಚಾರ, ಉಡುಗೆ - ತೊಡುಗೆ ಬಗ್ಗೆ ಜನಾಂಗದ ಮುಂದಿನ ಪೀಳಿಗೆಗೆ ತಿಳಿಸಿ ಕೊಡುವ ನಿಟ್ಟಿನಲ್ಲಿ ಪ್ರತಿವರ್ಷ 6 ದಿನಗಳ ಕಾಲದ ಕಾರ್ಯಾಗಾರ ನಡೆಸುವದಕ್ಕೆ ಕೊಡವ ಸಮಾಜ ನಿರ್ಧರಿಸಿದೆ ಎಂದು ಹೇಳಿದರು. ಪದ್ದತಿ ಪರಂಪರೆ ಆಚರಣೆಯಲ್ಲಿ ಇನ್ನೊಬ್ಬರನ್ನು ಅವಲಂಬಿಸದೆ ಎಲ್ಲಾರಿಗೂ ಈ ವಿಚಾರ ತಿಳಿದಿರಬೇಕೆನ್ನುವ ಉದ್ದೇಶದಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗುವದು ಎಂದು ರಾಜೀವ್ ಬೋಪಯ್ಯ ಹೇಳಿದರು.
ಸಮಾಜದ ಉಪಾಧ್ಯಕ್ಷ ಚೆಪ್ಪುಡೀರ ಬೋಪಣ್ಣ ಅವರು ಮಾತನಾಡಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮತ್ತು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಈ ವರ್ಷದ ಕಾವೇರಿ ತೀರ್ಥೊದ್ಭವ ದಿನವಾದ ಅಕ್ಟೋಬರ್ 18 ರ ನಂತರ ಕೊಡವ ಸಮಾಜದಲ್ಲಿ ಎಲ್ಲಾ ತರಹದ ಪ್ಲಾಸ್ಟಿಕ್ ಬಳಕೆ ನಿಷೇದಿಸಲಾಗಿದೆ. ಪೇಪರ್ ನ್ಯಾಪ್ಕಿನ್ ಹೊರತು ಪಡಿಸಿ ಪೇಪರ್ ಕಪ್, ಪೇಪರ್ ತಟ್ಟೆ, ಥರ್ಮಕೋಲ್, ತಟ್ಟೆ ಸಾಸರ್ಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಇದಕ್ಕೆ ಸಮಾಜದ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಕೋರಿದರು.
ಸಮಾಜದ ಗೌರವ ಕಾರ್ಯದರ್ಶಿ ಪೊನ್ನಿಮಾಡ ಸುರೇಶ್ ಮಾತನಾಡಿ, ಮದುವೆ ಸಂದರ್ಭ ಗಂಗಾ ಪೂಜೆ ವೇಳೆ ವಧುವನ್ನು ತಡೆದು ಕುಣಿಯುವ ಪದ್ಧತಿ 3 ಗಂಟೆ ಮೀರದಂತೆ ನಿಗದಿಪಡಿಸಲಾಗಿದೆ. 3 ಗಂಟೆ ಮೀರಿದರೆ ರೂ. 25 ಸಾವಿರ ದಂಡ ಪಾವತಿಸುವ ಅವಕಾಶವನ್ನು ತಕ್ಷಣದಿಂದ ತೆಗೆದು ಹಾಕಲಾಗಿದೆ ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.
ಪೊನ್ನಂಪೇಟೆ ಕೊಡವ ಸಮಾಜಕ್ಕೆ ತನ್ನದೆ ಅದ ಇತಿಹಾಸವಿದೆ, ಆದ್ದರಿಂದ ಈ ಸಮಾಜದಲ್ಲಿ ತನ್ನದೆ ಆದ ಕಟ್ಟುಪಾಡನ್ನು ಹೊಂದಿದೆ. ಇದನ್ನು ಅರಿತು ಮದುವೆ ಸಮಾರಂಭ ಮಾಡುವವರು ಅರಿತುಕೊಂಡು ಸಹಕಾರ ನೀಡಬೇಕು ಎಂದು ಹೇಳಿದರು. ಪ್ರಸಕ್ತ ವರ್ಷದ ಅತಿವೃಷ್ಟಿಯಿಂದ ಸಂತ್ರಸ್ತರಾದ ಕೆಲವು ಕುಟುಂಬಗಳಿಗೆ ಸಮಾಜದ ಶಕ್ತಿಯಾನುಸಾರ ಸಹಾಯ ಮಾಡಲಾಗಿದೆ. ಅಲ್ಲದೆ ಕಷ್ಟದಲ್ಲಿರುವ ಕೆಲವು ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೂ ಸಮಾಜದಿಂದ ಶುಲ್ಕ ಪಾವತಿಸಿ ನೆರವು ನೀಡಲಾಗಿದೆ ಎಂದು ಪೊನ್ನಿಮಾಡ ಸುರೇಶ್ ಅವರು ಹೇಳಿದರು.
ಸಭೆಯಲ್ಲಿ ಸಮಾಜದ ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ಅಪ್ಪಂಡೇರಂಡ ಆರ್. ಶಾರದ, ಖಜಾಂಚಿ ಮೂಕಳೇರ ಪಿ. ಲಕ್ಷ್ಮಣ, ನಿರ್ದೇಶಕರುಗಳಾದ ಮಲ್ಲಮಾಡ ಪ್ರಭುಪೂಣಚ್ಚ, ಮೂಕಳಮಾಡ ಅರಸುನಂಜಪ್ಪ, ಅಡ್ಡಂಡ ಸುನೀಲ್ ಸೋಮಯ್ಯ, ಚೆಪ್ಪುಡಿರ ರಾಕೇಶ್ದೇವಯ್ಯ, ಮಂಡಚಂಡ ದಿನೇಶ್ ಚಿಟ್ಟಿಯಪ್ಪ, ಚೆಪ್ಪುಡಿರ ರೂಪ ಉತ್ತಪ್ಪ, ಚೊಟ್ಟೆಕಾಳಪಂಡ ಆಶಾಪ್ರಕಾಶ್ ಹಾಜರಿದ್ದರು.