ಮಡಿಕೇರಿ, ಸೆ,25 : ಕೂರ್ಗ್ ಹೋಂಸ್ಟೇ ಅಸೋಸಿಯೇಶನ್ನಿನ ನೂತನ ಅಧ್ಯಕ್ಷರಾಗಿ ಬಿ.ಜಿ.ಅನಂತ ಶಯನ ಅಧಿಕಾರ ಸ್ವೀಕರಿಸಿದರು.ನಿನ್ನೆ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರು ಗಳಾಗಿ ಬಾಬಿ, ನಿಮ್ಮಿಯಿ ಚೆಂಗಪ್ಪ, ಕಾರ್ಯದರ್ಶಿಯಾಗಿ ಮೀನಾ ಕಾರ್ಯಪ್ಪ, ಸಹ ಕಾರ್ಯದರ್ಶಿಯಾಗಿ ಅಂಬೆಕಲ್ ನವೀನ್ ಕುಶಾಲಪ್ಪ, ಖಜಾಂಚಿಯಾಗಿ ಉಷಾ ಬೆನ್, ಸಮಿತಿ ಸದಸ್ಯರಾಗಿ ಹೇಂ ಮಾದಪ್ಪ, ಕ|| ಭರತ್, ಮೋಂತಿ ಗಣೇಶ್, ಸಾಗÀರ್ ಕೆ.ಟಿ, ಕಬೀರ್ ತಿಮ್ಮಯ್ಯ, ಶಶಿ ಮೊಣ್ಣಪ್ಪ, ಕುಮಾರಿ ಕುಂಜಪ್ಪ, ಪ್ರಭುದೇವ್ ಮತ್ತು ದಿನೇಶ್ ಕಾರ್ಯಪ್ಪ ಆಯ್ಕೆಯಾದರು.ವಲಯ ಪ್ರತಿನಿಧಿಗಳಾಗಿ ಸಂಗೀತ ಮೋಹನ್‍ದಾಸ್, ಸುಧಾಕರ್ ವೈ.ಎ, ಮುದ್ದಪ್ಪ, ಪೊನ್ನಪ್ಪ, ರತನ್ ಸಿ.ಎಸ್, ಸುಜು, ರಾಗಿಣಿ ಸೂರಜ್ ಹಾಗೂ ಬಿದ್ದಂಡ ಗಪ್ಪು ನೇಮಕಗೊಂಡರು.ಈ ಸಂದರ್ಭ ನಿರ್ಗಮಿತ ಅಧ್ಯಕ್ಷ ಬಿ.ಸಿ. ಚೆಂಗಪ್ಪ ಅವರು ಮಾತನಾಡಿ, ಸ್ವಚ್ಛ ಆತಿಥ್ಯಕ್ಕೆ ಅಧಿಕೃತ ಹೋಂಸ್ಟೇಗಳು ಶ್ರಮಿಸುತ್ತಿದ್ದು, ಅನಧಿಕೃತ ಹೋಂ ಸ್ಟೇಗಳ ವಿರುದ್ಧ ಜಿಲ್ಲಾ ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.ಮಾಜಿ ಅಧ್ಯಕ್ಷ ಕೆ.ಎಂ. ಕರುಂಬಯ್ಯ ಸಂಸ್ಥೆ ಯ ಚಟುವಟಿP Éಗಳ ಪವರ್ ಪಾಯಿಂಟ್ ಪ್ರದರ್ಶಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅನಂತಶಯನ, ಹೋಂಸ್ಟೇ ಚಟುವಟಿಕೆಗಳು, ಕಾನೂನು ರಾಜ್ಯಾದ್ಯಂತ ಏಕತರನಾಗಿ ಇರುವಂತಾಗಲು, ರಾಜ್ಯ ಮಟ್ಟದಲ್ಲಿ ಸಂಘದ ಚಟುವಟಿಕೆ ವಿಸ್ತರಿಸಲು ಯತ್ನಿಸುವುದಾಗಿ ಹೇಳಿದರು. ವರ್ಷಂಪ್ರತಿ ಪ್ರವಾಸಿ ಉತ್ಸವ ಇತ್ಯಾದಿ ಕಡ್ಡಾಯವಾಗಿ ಮಾಡುವಂತೆ ಜಿಲ್ಲಾ ಆಡಳಿತವನ್ನು ಕೋರುವುದಾಗಿ ಹೇಳಿದರು.
ಕಾರ್ಯದರ್ಶಿ ವರದಿಯನ್ನು ಪ್ರೇಮ್ ದಂಬೆಕೋಡಿ, ಖಜಾಂಚಿ ವರದಿಯನ್ನು (ಮೊದಲ ಪುಟದಿಂದ) ಉಷಾ ಬೆನ್ ಮಂಡಿಸಿದರು. ಓಯೋ ಹಾಗೂ ಇತರ ಪ್ರವಾಸಿ ಸಂಸ್ಥೆಗಳಿಂದ ವ್ಯಾಪಾರ ಕುಂಠಿತವಾಗುತ್ತಿರುವ ಬಗ್ಗೆ ಹಾಗೂ ವ್ಯವಹಾರ ಕಲುಷಿತವಾಗುತ್ತಿರುವ ಬಗ್ಗೆ ವ್ಯಾಪಕ ಚರ್ಚೆಯಾಗಿ, ಅಂತಹ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಸಂಬಂಧಿಸಿದವರಲ್ಲಿ ಚರ್ಚಿಸಲು ತೀರ್ಮಾನಿಸಲಾಯಿತು.
ಕಾರ್ಯದರ್ಶಿ ಮೀನಾ ಕಾರ್ಯಪ್ಪ ವಂದನಾರ್ಪಣೆ ಮಾಡಿದರು. ಚುನಾವಣಾ ಪ್ರಕ್ರಿಯೆಯನ್ನು ಮದನ್ ಸೋಮಣ್ಣ ನೆರವೇರಿಸಿದರು.